Sunday, November 24, 2024
ಬೆಳ್ತಂಗಡಿ

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ದನ ಕಳ್ಳತನದ ಆರೋಪ ಹೊರಿಸಿ ಇಬ್ಬರ ಮೇಲೆ ಗುಂಪೊಂದರಿಂದ ಹಲ್ಲೆ-ಕಹಳೆ ನ್ಯೂಸ್

ಬೆಳ್ತಂಗಡಿ : ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ಪಿಕ್ ಅಪ್ ವಾಹನ ದುರಸ್ತಿ ಮಾಡಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮೇಲೆ ಗುಂಪೊಂದು ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಹಾಗೂ ಪಾದರಕ್ಷೆಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಬೆಳ್ತಂಗಡಿ ಕುಪ್ಪೆಟ್ಟು ನಿವಾಸಿ ಅಬ್ದುಲ್ ರಹೀಮ್ ಮಾರ್ಚ್ 31ರಂದು ಸಂಜೆಯ ವೇಳೆ ತಮ್ಮ ಪಿಕ್ ಅಪ್ ವಾಹನಕ್ಕೆ ದುರಸ್ತಿಗಾಗಿ ಮಹಮ್ಮದ್ ಮುಸ್ತಾಫ ಎಂಬವರೊಂದಿಗೆ ಬೆಳ್ತಂಗಡಿ ಚರ್ಚ್ ರೋಡ್‍ಗೆ ಹೋಗಿದ್ದರು. ಅಲ್ಲಿಂದ ಸವಣಾಲಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಊಟ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದರು. ಸವಣಾಲಿನಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಾಗ ರಾತ್ರಿ ಸುಮಾರು 10.30-10.45 ವೇಳೆಗೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ಬೈಕ್‍ನಲ್ಲಿ ಇಬ್ಬರು ಬಂದು ವಾಹನ ನಿಲ್ಲಿಸಲು ಸೂಚಿಸಿದ್ದು, ವಾಹನ ನಿಲ್ಲಿಸಿದಾಗ ಓಮ್ನಿ ಕಾರಿನಲ್ಲಿ ಬಂದ ಕೆಲವರು ಸೇರಿದಂತೆ ಒಂದು ಗುಂಪು ಅಬ್ದುಲ್ ರಹೀಮ್ ಹಾಗೂ ಮಹಮ್ಮದ್ ಮುಸ್ತಾಫ ಅವರ ಮೇಲೆ ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಪಾದರಕ್ಷೆಗಳಿಂದ ಹಲ್ಲೆ ನಡೆಸಿ, ಪಿಕ್ ಅಪ್ ವಾಹನವನ್ನು ಜಖಂಗೊಳಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಹಲ್ಲೆಯಿಂದ ರಕ್ತಸಿಕ್ತರಾಗಿದ್ದ ಅಬ್ದುಲ್ ರಹೀಮ್ ಹಾಗೂ ಮಹಮ್ಮದ್ ಮುಸ್ತಾಫರವರನ್ನು ಆ ದಾರಿಯಲ್ಲಿ ತೆರಳುತ್ತಿದ್ದ ಓರ್ವರು ಆಸ್ಪತ್ರೆಗೆ ದಾಖಲು ಮಾಡಿದ್ದು, ಇನ್ನು ಹಲ್ಲೆ ನಡೆಸಿದವರು ಸಾಬು, ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವವರು ಎಂದು ಗಾಯಾಳುಗಳು ಗುರುತಿಸಿದ್ದು ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು