Tuesday, January 21, 2025
ಸುದ್ದಿ

ಬೈಕಂಪಾಡಿಯಲ್ಲಿ ವಿಕಲಚೇತನ ಮಗುವಿಗೆ 25000 ರೂಪಾಯಿ ಚೆಕ್ ವಿತರಿಸಿದ ಶಾಸಕ ಡಾ.ಭರತ್ ಶೆಟ್ಟಿ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ಬೈಕಂಪಾಡಿ ಹತ್ತನೇ ವಾರ್ಡಿನಲ್ಲಿ MCF ಸಾಮಾಜಿಕ ಬದ್ಧತಾ ನಿಧಿಯಡಿ ನೀಡಲಾದ 25000 ರೂಪಾಯಿ ಚೆಕ್ ಅನ್ನು ವಿಕಲಚೇತನ ಮಗುವಿನ ಪೋಷಕರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯೆ ಸುಮಿತ್ರಾ ಕರಿಯ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ರಾಜೇಶ್ ಬೈಕಂಪಾಡಿ, ಮಂಗಳೂರು ನಗರ ಉತ್ತರ ಭಾಜಪಾ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ ,ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಬೂತ್ ಅಧ್ಯಕ್ಷರಾದ ಪುನೀತ್, ಕಾರ್ಯದರ್ಶಿ ರಾಜೇಶ್ ಕರ್ಕೇರ, ಪ್ರಮುಖರಾದ ಗಿರೀಶ್ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.