Tuesday, January 21, 2025
ಹೆಚ್ಚಿನ ಸುದ್ದಿ

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿನ ನೂತನ ಮುಖ್ಯೋಪಾಧ್ಯಾಯರಾಗಿ ಶ್ರೀಮತಿ ಶಾಂಭವಿ ಮಾತಾಜಿ-ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಮತಿ ವಸಂತಿ ಮಾತಾಜಿಯವರ ನಿವೃತ್ತಿಯ ಕಾರಣ ಬೆಳಿಗ್ಗೆ ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ಪೂಜೆ ಸಲ್ಲಿಸಿ, ಪ್ರೌಢಶಾಲೆಯ ಕಚೇರಿಯಲ್ಲಿ ವಿದ್ಯಾಕೇಂದ್ರದ ಹಿರಿಯರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ಇವರು ದೀಪ ಬೆಳಗಿಸಿ ಶ್ರೀಮತಿ ಶಾಂಭವಿ ಮಾತಾಜಿಯವರಿಗೆ ಮುಖ್ಯೋಪಾಧ್ಯಾಯರಾಗಿ ಜವಾಬ್ದಾರಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯೋಪಾಧ್ಯಾಯರಾಗಿದ್ದ ಶ್ರೀಮತಿ ವಸಂತಿ ಮಾತಾಜಿಯವರು ಕೀ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಡಾ. ಕಮಲ ಪ್ರ.ಭಟ್, ಹಾಗೂ ಆಡಳಿತ ಮಂಡಳಿ ಸದಸ್ಯೆಯರು ಅವರಿಗೆ ಹೂ ಮುಡಿಸಿ ತಿಲಕವಿಟ್ಟು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ, ಸಹಸಂಚಾಲಕರಾದ ಶ್ರೀ ರಮೇಶ್‍ಎನ್, ಆಡಳಿತ ಮಂಡಳಿ ಸದಸ್ಯೆಯರುಗಳಾದ ಶ್ರೀಮತಿ ಲಕ್ಷ್ಮಿರಘುರಾಜ್, ಶ್ರೀಮತಿ ಸುಧಾ ಭಟ್, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರು