Sunday, January 19, 2025
ಕಾಸರಗೋಡುಕ್ರೈಮ್ಮಂಜೇಶ್ವರಸುದ್ದಿ

Breaking News : ಆರ್ ಎಸ್ ಎಸ್ ಮುಖಂಡ, ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ್ ಚಟ್ಟಿಯಾರ್ ಮನೆಗೆ ದುಷ್ಕರ್ಮಿಗಳಿಂದ ದಾಳಿ, ಬೆಂಕಿ ಹಚ್ಚಲು ಯತ್ನ – ಕಹಳೆ ನ್ಯೂಸ್

ಮಂಜೇಶ್ವರ : ಆರ್ ಎಸ್ ಎಸ್ ಹಿರಿಯ ಮುಖಂಡ, ಮಂಗಳೂರು ವಿಭಾಗ ಸಂಘಚಾಲಕರಾದ ಗೋಪಾಲ್ ಚಟ್ಟಿಯಾರ್ ಮನೆಯ ಮೇಲೆ ದುಷ್ಕರ್ಮಿಗಳ ದಾಳಿಯತ್ನ ನಡೆಸಿದ್ದಾರೆ.

ಮಂಜೇಶ್ವರ ತಾಲೂಕಿನ ಪೆರ್ಲದ, ಬಜಕ್ಲೂಡ್ಲು ರಸ್ತೆಯಲ್ಲಿರುವ ಚೆಟ್ಟಿಯಾರ್ ಮನೆಗೆ ಬಂದ ಪುಂಡರು ರಾತ್ರಿ ಬುಲೆಟ್ ಬೈಕ್ ಗೆ ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದು, ಪೆಟ್ರೋಲ್ ದಾಳಿ ಹಾಗೂ ಅಂಗಳದಲ್ಲಿ ನಿಲ್ಲಿಸಿದ ಸ್ವಿಫ್ಟ್ ಕಾರಿಗೆ ಕಲ್ಲೆಸೆತದು ಹಾನಿಗೊಳಿಸಿದ ಘಟನೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಜೇಶ್ವರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಬಿಜೆಪಿ ಆರೋಪಿಸಿದ್ದು, ಚುನಾವಣಾ ಪ್ರಚಾರ ನಡೆಯುವ ಸಮಯದಲ್ಲಿ ಇಂತಹ ಸಮಾಜದ ಶಾಂತಿ ಕದಡುವ ಘಟನೆ ಖಂಡನೀಯ ಎಂದು ಕಿಡಿಕಾರಿದೆ.‌ ಆರ್ ಎಸ್ ಎಸ್ ಮುಖಂಡರ ಮನೆಯ ದಾಳಿಯನ್ನು ಸಂಘಪರಿವಾರ ತೀಕ್ಷ್ಣವಾಗಿ ಖಂಡಿಸುತ್ತದ್ದು, ಇದರ ಪರಿಣಾಮ ಚುನಾವಣೆಯಲ್ಲಿ ವಿರೋಧಿಗಳು ಎದುರಿಸಬೇಕಾಗೀತು. ಇದು ವಿರೋಧಿ ಪಕ್ಷಗಳ ಕೃತ್ಯ ಎಂದು ಬಿಜೆಪಿ ಮೂಲಗಳು ಆರೋಪಿಸಿದೆ. ಸದ್ರಿ ಪ್ರಕರಣ ದಾಖಲಿಸಿಕೊಂಡು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.