Saturday, November 23, 2024
ಸುದ್ದಿ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ನೂತನ ಪ್ರಾಂಶುಪಾಲರಾಗಿ ಡಾ. ಅನಸೂಯಾ ರೈ ನೇಮಕ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಿಕೆ ಡಾ. ಅನಸೂಯಾ ರೈ, ನೂತನ ಪ್ರಾಂಶುಪಾಲರಾಗಿ (ಪ್ರಭಾರ) ಮಾರ್ಚ್ 31 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 35 ವರ್ಷಗಳಿಂದ ವಾಣಿಜ್ಯಶಾಸ್ತ್ರ ಬೋಧಿಸುತ್ತಿರುವ ಡಾ. ಅನಸೂಯಾ ರೈ, ದಿ.ಪಠೇಲ್ ಶ್ರೀ ಇಂದು ಹಾಸರೈ- ಸುಲೋಚನಾರೈ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಸಂತಆಗ್ನೇಸ್ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದಾರೆ. ಕಲಿಕೆಯಲ್ಲಿ ಯಾವತ್ತೂ ಮುಂದಿದ್ದ ಅವರು ರಾಜ್ಯದಲ್ಲೇ 66ನೇ ರ್ಯಾಂ ಕ್ನೊಂದಿಗೆ ಕಾಲೇಜು ಶಿಕ್ಷಣಕ್ಕಾಗಿ ಕೇಂದ್ರಸರ್ಕಾರ ನೀಡುವ ರಾಷ್ಟ್ರಮಟ್ಟದ ಮೆರಿಟ್ ಸ್ಕಾಲರ್ಶಿಪ್ ಪಡೆದಿದ್ದರು. ಮಂಗಳೂರು ವಿವಿಯಲ್ಲಿ ಎಂ.ಕಾಂ ಪೂರೈಸಿದ ಅವರು (1985) ಮೂಲ್ಕಿಯ ವಿಜಯಾ ಕಾಲೇಜು, ಬೆಳ್ತಂಗಡಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮತ್ತು ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ. ಪಿಸುಬ್ರಹ್ಮಣ್ಯ ಯಡಪಡಿತ್ತಾಯರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪೂರೈಸಿರುವ ಡಾ. ಅನಸೂಯಾರೈ, ಎಂ.ಕಾಂವಿಭಾಗದ ಸಂಯೋಜಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈವರೆಗೆ ಅವರು 8 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ತಮ್ಮ ಯಶಸ್ಸಿನಲ್ಲಿ ಪತಿದಿ. ಮಾಗಣ್ತಡಿ ಕಿಶೋರ್ಕುಮಾರ್ಶೆಟ್ಟಿ ಅವರ ಪಾತ್ರ ದೊಡ್ಡದು ಎನ್ನುವ ಡಾ. ಅನಸೂಯಾ ರೈ ಅವರಿಗೆ ಅಂಕುಶ್ ಶೆಟ್ಟಿ ಎಂಬ ಮಗನಿದ್ದಾರೆ.