ಬಂಟ್ವಾಳ : ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಮಾರ್ಚ್ 14ರಿಂದ ಏಪ್ರಿಲ್ 12 ರವರೆಗಿನ ಜಾತ್ರಾ ಮಹೋತ್ಸವ ಇರಲಿದ್ದು, ಕೊರೊನಾ ಭೀತಿ ಇರುವ ಕಾರಣ ದ.ಕ. ಜಿಲ್ಲಾಧಿಕಾರಿ ಡಾ.ಬಿ ರಾಜೇಂದ್ರ ಅವರ ಆದೇಶಕ್ಕೆ ಅನುಗುಣವಾಗಿ ಈ ಬಾರಿ ಶ್ರೀ ಕ್ಷೇತ್ರ ಪೊಳಲಿಯ ಜಾತ್ರೆಯನ್ನು ಸಾಂಕೇತಿಕವಾಗಿ ಆಚರಿಸಿದರೆ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಭಕ್ತರು ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ದೇಗುಲದ ಜಾಗದಲ್ಲಿ ಸಂತೆ/ಅಂಗಡಿ ಇಡಲು ಅವಕಾಶವಿರುವುದಿಲ್ಲ ಎಂದು ಶ್ರೀ ಕೇತ್ರದ ಪ್ರಕಟನೆ ತಿಳಿಸಿದೆ.