Friday, January 24, 2025
ಹೆಚ್ಚಿನ ಸುದ್ದಿ

ಕೇರಳ ತುಳುನಾಡಿನಲ್ಲೂ “ಬಲೇ ತುಳು ಲಿಪಿ ಕಲ್ಪುಗ” ಕಾರ್ಯಾಗಾರಕ್ಕೆ ಚಾಲನೆ-ಕಹಳೆ ನ್ಯೂಸ್

ತುಳು ಭಾಷೆ, ಸಂಸ್ಕøತಿ, ಲಿಪಿ, ಆಚಾರ ಇಚಾರಗಳನ್ನು ಉಳಿಸಿ ಬೆಳೆಸುವ ಹಾಗು ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇಧಕ್ಕೆ ಸೇರಿಸಬೇಕು ಮತ್ತು ತುಳುವನ್ನು ರಾಜ್ಯದ ಅಧಿಕೃತ ಭಾಷೆನ್ನಾಸಬೇಕು ಎಂಬ ಉದ್ದೇಶದಿಂದ ತುಳುನಾಡಿನಲ್ಲಿ ಕಲಸ ಮಾಡುತ್ತಿರುವ ಸಂಘನೆಯಾದ ಜೈ ತುಲುನಾಡ್(ರಿ) ಕಾಸ್ರೋಡ್ ಘಟಕವು ಬಲೇ ತುಳು ಲಿಪಿ ಕಲ್ಪುಗ ಕಾರ್ಯಾಗಾರವನ್ನು ತೀಯಾ ಸಮಾಜ ಉದ್ಯಾವರ ಮಾಡ ಇದರ ಸಹಯೋಗದಲ್ಲಿ ತೀಯಾ ಸಮಾಜಬವನದಲ್ಲಿ ಮಂಜೇಶ್ವರ ಮಾಡದಲ್ಲಿ ತಾರೀಕು 3.4.2021 ಶನಿವಾರದಂದು ಪ್ರಾರಂಬಿಸಿಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮ ದ ಉದ್ಘಾಟನೆಯನ್ನು ಗೌರವಾನ್ವಿತ ಅರಸು ಮಂಜೀಷ್ಣಾರ್ ಕ್ಷೇತ್ರ ಮಾಡದ ಪಲಯ ದೈವದ ಪಾತ್ರಿ ರಾಜ ಬೆಲ್ಚಾಡರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಜೈತುಳುನಾಡ್ ರಿ ಕಾಸ್ರೊಡು ಇದರ ಅಧ್ಯಕ್ಷ ರಾದ ಹರಿಕಾಂತ್ ಕಾಸ್ರೊಡು ಅಧ್ಯಕ್ಷೆತೆ ವಹಿಸಿದರು.

ಮುಖ್ಯ ಅಥಿತಿಗಳಾಗಿ ಮಂಜೇಶ್ವರ ಪಂಚಾಯತ್ ಸದಸ್ಯ ಲಕ್ಷ್ಮಣ ಕುಲಾಲ್, ಅರಸು ಮಂಜೀಷ್ಣಾರ್ ದೈವಸ್ಥಾನದ ಮೆಗ್ಯ ದೈವದ ಪಾತ್ರಿ ತಿಮಿರಿ ಬೆಲ್ಚಾಡರು, ಮಾಡ ಸಮಾಜದ ಹಿತೈಷಿ ಹರೀಶ್ ಶೆಟ್ಟಿ ಹಾಗು ಮಾಜಿ ಪಂಚಾಯಿತಿ ಸದಸ್ಯೆ ಶಶಿಕಲಾ ಪಾಲ್ಗೊಂಡರು.

ತುಳು ಲಿಪಿ ಶಿಕ್ಷಕರಾಗಿ ಜೈತುಳುನಾಡ್ ರಿ ಕಾಸ್ರೊಡು ಇದರ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ಕಾರಿಂಜೆ ಹಾಗು ಕಾರ್ಯದರ್ಶಿ ಕಾರ್ತಿಕ್ ಪೆರ್ಲ ತರಗತಿ ನೀಡಿದರು.

ಸಂಘಟನೆಯ ಗೌರವಾಧ್ಯಕ್ಷ ಉಮೇಶ್ ಸಾಲಿಯಾನ್ ಸಿರಿಯಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕು. ತೃಪ್ತಿ ಮತು ಕು. ಪಂಚಮಿ ಪ್ರಾರ್ಥಿಸಿದರು.

ಸಂಘಟನೆಯ ಸದಸ್ಯೆ ಕುಶಾಲಾಕ್ಷಿ ವಿ ಕುಲಾಲ್ ಕನ್ವಥೀರ್ಥ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕಾರ್ತಿಕ್ ಪೆರ್ಲ ಧನ್ಯವಾದಗೈದರು.