Thursday, January 23, 2025
ಬಂಟ್ವಾಳ

ಕಲ್ಲಡ್ಕ-ಕಾಂಞಂಗಾಡು ಹೆದ್ದಾರಿಯಲ್ಲಿ ಸರಣಿ ಅಪಘಾತ; ದ್ವಿಚಕ್ರ ಸವಾರನಿಗೆ ಗಾಯ-ಕಹಳೆ ನ್ಯೂಸ್

ಬಂಟ್ವಾಳ : ಕಲ್ಲಡ್ಕ-ಕಾಂಞಂಗಾಡು ಹೆದ್ದಾರಿಯ ಉಕ್ಕುಡ-ಅಪ್ಪೆರಿಪಾದೆ ಮಧ್ಯೆ ಟಿಪ್ಪರ್, ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಪಘಾತದಲ್ಲಿ ದ್ವಿಚಕ್ರ ಸವಾರ ಗಾಯಗೊಂಡಿದ್ದು, ಗಾಯಾಳುವನ್ನು ದ್ವಿಚಕ್ರ ವಾಹನ ಸವಾರ ಮುಳಿಯ ತಾಳಿಪಡ್ಪು ನಿವಾಸಿ 43 ವರ್ಷದ ರತ್ನಾಕರ ಶೆಟ್ಟಿ ಎಂದು ತಿಳಿದುಬಂದಿದೆ. ಪೆರ್ಲ ಕಡೆಯಿಂದ ವಿಟ್ಲಕ್ಕೆ ಹೋಗುತ್ತಿದ್ದ ಬೆಲೆನೊ ಕಾರೊಂದು ಟಿಪ್ಪರ್ ಅನ್ನು ಹಿಂದಿಕ್ಕಲು ಹೋದ ಸಂದರ್ಭದಲ್ಲಿ ಮುಂಭಾಗದಿಂದ ರತ್ನಾಕರ ಶೆಟ್ಟಿ ಅವರು ದ್ವಿಚಕ್ರ ಅವರು ದ್ವಿಚಕ್ರವಾಹನ ಚಲಾಯಿಸಿಕೊಂಡು ಬಂದಿದ್ದಾರೆ. ದ್ವಿಚಕ್ರಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರು ಟಿಪ್ಪರ್ ಗೆ ಡಿಕ್ಕಿಯಾಗಿ ದ್ಚಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ರಸ್ತೆಯ ಬಲಭಾಗದ ಮಣ್ಣಿನ ದಿಬ್ಬದ ಮೇಲೆ ಉರುಳಿ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು