Sunday, November 24, 2024
ಉಡುಪಿ

ಉಡುಪಿಯ ಕಾಪುವಿನ ಮುದರಂಗಡಿಯಲ್ಲಿ ಆಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದು ಎರಡೂವರೆ ವರ್ಷದ ಮಗು ಮೃತ್ಯು-ಕಹಳೆ ನ್ಯೂಸ್

ಉಡುಪಿ : ಉಡುಪಿಯ ಕಾಪುವಿನ ಮುದರಂಗಡಿಯಲ್ಲಿ ಆಕಸ್ಮಿಕವಾಗಿ ಜಾರಿ ತೆರೆದ ಬಾವಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಏಪ್ರಿಲ್ 3 ರಂದು ಸಂಜೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಮಗುವನ್ನು ಅದಮಾರಿನ ಜಯಲಕ್ಷ್ಮಿ ಮತ್ತು ಕೃಷ್ಣ ದಂಪತಿಗಳ ಪುತ್ರಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಶನಿವಾರ, ಇವರ ಕುಟುಂಬವು ನಗರದಲ್ಲಿ ಮಾರುಕಟ್ಟೆಗೆ ಬಂದಿದ್ದು, ಈ ಸಂದರ್ಭದಲ್ಲಿ ಮಗು ಆಡುವಾಗ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಪೋಷಕರು ವಸ್ತುಗಳನ್ನು ಖರೀದಿ ಮಾಡುತ್ತಿದ್ದ ಅಂಗಡಿಯ ಬಳಿ ಬಾವಿ ಇತ್ತು.

ಮಗಳು ಕಾಣೆಯಾಗಿದ್ದಾಳೆಂದು ತಿಳಿದ ನಂತರ ತಾಯಿ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಈ ಮೂಲಕ ಮಗುವಿನ ಪತ್ತೆ ಕಾರ್ಯ ಆರಂಭವಾಗಿದೆ. ಸ್ವಲ್ಪ ಸಮಯದ ನಂತರ, ಶಿರ್ವಾ ಪೊಲೀಸರು ಹಾಗೂ ಸ್ಥಳೀಯರು ಬಾವಿಯ ಬಳಿ ಒಂದು ಚೀಲ ಮತ್ತು ಹೂವನ್ನು ನೋಡಿದರು. ಈ ಸಂದರ್ಭದಲ್ಲಿ ಬಾವಿಯಲ್ಲಿ ಮಗು ಬಿದ್ದಿರುವುದು ಕಂಡು ಬಂದಿದೆ. ಈ ಕುರಿತು ಶಿರ್ವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.