ಮಂಗಳೂರು : ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ವೇಷಗಳು ಸರ್ವಸಾಮಾನ್ಯ.
ಅದರಲ್ಲೂ ಹುಲಿ ಕರಡಿ ವೇಷ ಟಾಸೆಯ ಅಭರ ಅವರು ನಲಿಯುವ ಶೈಲಿ ನೋಡಲು ಬಹಳ ಚಂದ. ಆದರೆ, ಈಗ ಅಂತಹ ಹುಲಿ ಹೆಜ್ಜೆಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ನಮ್ಮ ಅರಣ್ಯ ಸಚಿವ ರಮಾನಾಥ ರೈ. ಸಮಾಜಿಕ ಜಾಲ ತಾಣಗಳಲ್ಲಿ ರೈ ಪಿಲಿ ವೇಷದ್ದೇ ಸುದ್ದಿ. ಇಷ್ಟಕ್ಕೂ ನಡೆದದ್ದು ಇಷ್ಟೇ ಕಾರ್ಯಕ್ರಮ ಒಂದರಲ್ಲಿ ಹುಲಿವೇಷದ ಟಾಸೆಯ ಅಭರಕ್ಕೆ ತಡೆದುಕೊಳ್ಳಲಾರದೆ ಸಚಿವ ರೈ ಒಂದೆರಡು ಹೆಜ್ಜೆ ಹಾಕಿದ್ದಾರೆ. ಆದರೆ, ಅದನ್ನು ಯಾರೋ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈಗ ಅದು ವೈರಲ್ ಆಗಿದೆ.