Wednesday, January 22, 2025
ಪುತ್ತೂರು

ನೆಹರೂ ನಗರದಲ್ಲಿ ನಾಳೆ ರಿಬ್ಬನ್ಸ್ ಆಂಡ್ ಬಲೂನ್ಸ್ ಕೇಕ್ ಶಾಪ್ ಶುಭಾರಂಭ-ಕಹಳೆ ನ್ಯೂಸ್

ಪುತ್ತೂರು : ನೆಹರೂ ನಗರ, ಕಬಕ ಪುತ್ತೂರಿನಲ್ಲಿರುವ ಪಾಟ್ಲಾ ಕಟ್ಟಡದ ನೆಲಮಹಡಿಯಲ್ಲಿ ಮುಂಬೈಯ ಪ್ರಖ್ಯಾತ ಕೇಕ್ ತಯಾರಿಕಾ ಸಂಸ್ಥೆ ರಿಬ್ಬನ್ಸ್ ಆಂಡ್ ಬಲೂನ್ಸ್ ನ ನೂತನ ಶಾಖೆಯು ಏ 5 ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೇಕ್ ಶಾಪ್, ರುಚಿ ರುಚಿಯಾದ ಕೇಕ್, ಹುಟ್ಟುಹಬ್ಬ- ಶುಭಾ ಸಮಾರಂಭಗಳ ಆಚರಣೆಗಾಗಿ ವೆರೈಟಿ ಡಿಸೈನ್ ಗಳಲ್ಲಿ ಕೇಕ್, ಹೀಗೆ ಕೇಕ್ ಪ್ರಿಯರಿಗೆ ಆರಂಭವಾಗಲಿದೆ. ಸುಧಾಕರ್ ಆಳ್ವ ಮಾಲಕತ್ವದಲ್ಲಿ ಭ್ರಮರಿ ಎಂಟರ್ ಪೈಸಸ್ ಅಡಿಯಲ್ಲಿ ಶಾಖೆಯು ಕಾರ್ಯಾಚರಿಸಲಿದ್ದು, ಹುಟ್ಟು ಹಬ್ಬ ಆಚರಣೆ ಜತೆಗೆ ಇನ್ನಿತರ ಕಾರ್ಯಕ್ರಮಗಳನ್ನೂ ಆಯೋಜಿಸಲಿದೆ ಎಂದು ಸಂಸ್ಥೆಯ ಬ್ಯುಸಿನೆಸ್ ಡೆವೆಲಪ್ಮೆಂಟ್ ಮ್ಯಾನೇಜರ್ ನಿತೇಶ್ ಶೆಟ್ಟಿ ಇರಂದಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಮಂಗಳೂರು ನಗರದ ಕೈಕಂಬ, ವಾಮಂಜೂರು, ಬಳ್ಳಾಲ್ ಬಾಗ್, ಬೆಂದೂರ್ ವೆಲ್, ತೊಕ್ಕೊಟ್ಟು, ದೇರಳಕಟ್ಟೆ, ಕಾವೂರು, ಸುರತ್ಕಲ್, ಮೂಡಬಿದಿರೆ, ಕಿನ್ನಿಗೋಳಿ, ಬಜ್ಪೆ, ಕಾರ್ಕಳ, ಶಿರ್ವ, ಕಾಪು, ಸಂತೆಕಟ್ಟೆ, ಉಡುಪಿ, ಮಣಿಪಾಲ್, ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಘಟಕವು 20ನೇ ಶಾಖೆಯಾಗಿದೆ. ಮುಂಬಯಿ-ಪುಣೆ ಸೇರಿದಂತೆ ಹಲವೆಡೆ ಹೊಂದಿರುವ 139 ನೇ ಶಾಖೆಯಾಗಿದೆ. ಓರಿಯೆಂಟಲ್ ಇನ್ಸೂರೆನ್ಸ್ ಮತ್ತು ಅರವಿಂದ್ ಮೋಟಾರ್ಸ್‍ನ ಅಡ್ಮಿನ್ ಮ್ಯಾನೇಜರ್ ಕೆ ಕೆ ಶೆಟ್ಟಿ, ನೂತನ ಅಂಗಡಿಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನವದುರ್ಗಾ ಫುಡ್ ಪ್ರಾಡಕ್ಟ್ ಪ್ರೈಲಿ. ನ ಎಮ್ ಡಿ ಗುಣಪಾಲ್ ಶೆಟ್ಟಿ, ಪುಣೆ ಮತ್ತು ಮಂಗಳೂರು ವಲಯದ ಕೇಕ್ ಶಾಪಿನ ಮಾಲಕರಾದ ಸತೀಶ್ ಶೆಟ್ಟಿ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಗೋಪಿನಾಥ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ಮಾಣಿಯ ಮ್ಯಾನೇಜರ್ ಶ್ಯಾಮ್ ಸ್ವರೂಪ್, ಸಿಎ ಸುಧೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.