Wednesday, January 22, 2025
ಹೆಚ್ಚಿನ ಸುದ್ದಿ

ಕಲ್ಲೋಣಿಯಲ್ಲಿ ಬೋರ್ ವೆಲ್ ಕೊರೆಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ ಬೆಳ್ಳಾರೆ ಗ್ರಾಮ ಪಂಚಾಯತ್-ಕಹಳೆ ನ್ಯೂಸ್

ಬೆಳ್ಳಾರೆ : ಕಲ್ಲೋಣಿ ಮುತ್ತು ಮಾರಿಯಮ್ಮ ದೇವಿ ದೇವಸ್ಥಾನದ ಬಳಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಆಗಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಬೋರ್ ವೆಲ್ ಕೊರೆಸಿ ನೀರಿನ ಸಮಸ್ಯೆಯನ್ನು ನಿವಾರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೀರಿನ ಬೋರ್ ಪಾಯಿಂಟ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆಯವರು ಮಾಡಿಸಿ ರಾತ್ರಿ ಬೋರು ತೆಗೆಸಿದರು. ಬೋರ್ ವೆಲ್ ನಲ್ಲಿ ನೀರು ಸಿಕ್ಕಿರುವುದರಿಂದ ಕುಡಿಯುವ ನೀರಿಗೆ ಜನರಿಗೆ ತುಂಬಾ ಪ್ರಯೋಜನವಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ನ ಸದಸ್ಯೆ ಶ್ರೀಮತಿ ಭವ್ಯ ರವಿಕುಮಾರ್, ಕನದಾಸ, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯ ಮಣಿಕಂಠ, ಚಂದ್ರಕೋಲ್ಚಾರ್, ಸುರೇಶ, ಜಗದೀಶ್ ಚೀಮುಳ್ಳು, ವೀರನಾಥ, ಸಂಜೀವ ಬೀಡು, ರಮೇಶ, ಪ್ರಸಾದ, ಅರುಣ್ ರಾಜ್, ಗ್ರಾಮದ ಫಲಾನುಭವಿಗಳು ಉಪಸ್ಥಿತರಿದ್ದರು.