Tuesday, January 21, 2025
ಬಂಟ್ವಾಳ

ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಂದ ಯುವಕನ ಮೇಲೆ ಹಲ್ಲೆ- ಕಹಳೆ ನ್ಯೂಸ್‍

ಬಂಟ್ವಾಳ : ದ.ಕ. ಜಿಲ್ಲೆಯ ಬಿಸಿರೋಡ್ ನಲ್ಲಿ ಭಾನುವಾರ ರಾತ್ರಿ ಯುವಕನ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧದಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕು ಬ್ರಹ್ಮರಕೂಟ್ಲು ಸಮೀಪದ ಉಮ್ಮಣ್ಣಗುಡ್ಡೆ ನಿವಾಸಿ 30ವರ್ಷದ ಮನೋಜ್ ಹಲ್ಲೆಗೊಳಗಾದವರು. ಮನೋಜ್, ಭಾನುವಾರ ರಾತ್ರಿ ಅಜ್ಜಿಬೆಟ್ಟು ಕ್ರಾಸ್‍ನ ಬಳಿ ಗಾಡಿ ನಿಲ್ಲಿಸಿ ಅಂಗಡಿ ಮುಂಭಾಗ ನಿಂತಿದ್ದ ಸಂದರ್ಭದಲ್ಲಿ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳಿಬ್ಬರು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೋಜ್, ಅಜ್ಜಿಬೆಟ್ಟು ಕ್ರಾಸ್‍ನ ಬಳಿ ಗಾಡಿ ನಿಲ್ಲಿಸಿ ಅಂಗಡಿ ಮುಂಭಾಗ ನಿಂತಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳಿಬ್ಬರು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ಮನೋಜ್ ಅವರು ಎರಡು ವಾರ ಹಿಂದೆಯಷ್ಟೇ ವಿದೇಶದಲ್ಲಿ ಸಿವಿಲ್ ಎಂಜಿನಿಯರ್ ಆಗಿ, ಊರಿಗೆ ಬಂದಿದ್ದರು. ಇದೀಗ ಅವರಿಗೆ ಮದುವೆ ನಿಶ್ಚಯವಾಗಿದ್ದು, ಸದ್ಯದಲ್ಲೇ ವಿವಾಹ ನಿಗದಿಯಾಗಿತ್ತು. ಈ ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್‍ಪಿ ವೆಲೆಂಟೈನ್ ಡಿಸೋಜ, ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಚೆಲುವರಾಜ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು