Tuesday, January 21, 2025
ಹೆಚ್ಚಿನ ಸುದ್ದಿ

ಬಂದಾರು ಪಂಚಾಯತ್‍ನ ನಿವಾಸಿ ಬಾಡ ಮೊಗೇರರ ಮನೆ ದುರಸ್ತಿ ಕಾರ್ಯ ; ಕಷ್ಟಕ್ಕೆ ಸ್ಪಂಧಿಸಿ ಒಗ್ಗಟ್ಟು ಪ್ರದರ್ಶಿಸಿದ ಸಹೃದಯಿಗಳು – ಕಹಳೆ ನ್ಯೂಸ್

ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ ಮುಂಡೂರು ನಿವಾಸಿಯಾಗಿರುವ ಬಾಡ ಮುಗೇರರವರು ಅನಾರೋಗ್ಯ ಪೀಡಿತರಾಗಿದ್ದು ತಂಗಿ ಲೀಲಾರವರ ದುಡಿಮೆಯಿಂದ ಜೀವನ ನಡೆಸುತ್ತಿದ್ದಾರೆ. ಇವರ ಮನೆಯ ಮಾಡು ಸಂಪೂರ್ಣ ಹಾಳಾಗಿದ್ದು ಗಾಳಿ ಮಳೆಗೆ ಬಿದ್ದು ಹೋಗುವ ಅಪಾಯದಲ್ಲಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಈ ಮನೆಗೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಕಣಿಯೂರು ಒಟ್ಟಾಗಿ ಹೊಸ ರೂಪವನ್ನ ನೀಡಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಕಣಿಯೂರು ಇದರ ಸದಸ್ಯರಾದ ದಿನೇಶ್‍ರವರು ಬಾಡ ಮುಗೇರ ಅವರ ಕಷ್ಟದ ಪರಿಸ್ಧಿತಿಯನ್ನ ಪಂಚಾಯತ್‍ಗೆ ತಿಳಿಸಿ ಮಾಡು ರಿಪೇರಿಗೆ ಅನುದಾನ ನೀಡುವಂತೆ ಕೇಳಿಕೊಂಡಿದ್ದರು.

ಮನೆಯ ಮಾಡು ರಿಪೇರಿಗೆ ಬೇಕಾದ ಅನುದಾನವನ್ನು ನೀಡಲು ಗ್ರಾ.ಪಂ ಅಧ್ಯಕ್ಷರು,ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಇವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸುಮಾರು 25,000ರೂಪಾಯಿಗಳ ಕ್ರಿಯಾಯೋಜನೆ ತಯಾರಿಸಿ ಪರಿಶಿಷ್ಟ ಜಾತಿ ಅನುದಾನದಲ್ಲಿ 15,000ರೂಪಾಯಿಗಳನ್ನು ನೀಡಿದೆ.

ಪದ್ಮುಂಜ ಸಿ.ಎ. ಬ್ಯಾಂಕ್‍ನ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ 5000/-, ಗ್ರಾ.ಪಂ ಸದಸ್ಯರಾದ ದಿನೇಶ್ ಗೌಡ ಖಂಡಿಗ 5,000/- ಹಾಗೂ ಗ್ರಾ.ಪಂ ಆಡಳಿತ ಮಂಡಳಿ ಸಿಬ್ಬಂದಿ ವರ್ಗ,ಉದಾರ ದಾನಿಗಳ ಸಹಕಾರದಿಂದ ಮನೆಯ ಮಾಡಿಗೆ ಬೇಕಾದ ಪಕ್ಕಾಸು, ರೀಪು, ಸರಳು ಖರೀದಿಸಿ ಮನೆ ರಿಪೇರಿ ಕಾರ್ಯವನ್ನು ಮಾಡಲಾಯಿತು.

ಮನೆ ರಿಪೇರಿ ಸಂದರ್ಭದಲ್ಲಿ ಬೇಕಾಗುವ ಶ್ರಮದ ಸಹಕಾರವನ್ನು ವಿಪತ್ತು ನಿರ್ವಹಣೆ ಘಟಕದ ಮುಂದೆ ಇಟ್ಟಾಗ ಕೂಡಲೇ ಸ್ಪಂದಿಸಿ ಕಣಿಯೂರು, ಮಡಂತ್ಯಾರು, ತಣ್ಣೀರುಪಂಥ ಘಟಕಗಳ 12 ಜನ ಸ್ವಯಂಸೇವಕರ ತಂಡ ಬಹಳ ಅಚ್ಚುಕಟ್ಟಾಗಿ ರಿಪೇರಿ ಕಾರ್ಯವನ್ನು ಕೈಗೊಂಡಿದೆ.

ಸ್ವಯಂ ಸೇವಕರ ಈ ಕಾರ್ಯಕ್ಕೆ ಪಂಚಾಯತ್ ಶ್ಲಾಘನೇ ವ್ಯಕ್ತಪಡಿಸಿದೆ.ಅಲ್ಲದೆ ಅಲ್ಪಮಟ್ಟಿನ ಪಕ್ಕಾಸು ಹಾಗೂ ಹಂಚಿನ ವ್ಯವಸ್ಥೆಯನ್ನು ಮೋಹನ್ ಬಂಗೇರ ಬಟ್ಟೆಮಾರ್ ಇವರು ನೀಡಿದ್ದಾರೆ.

ಶ್ರಮದಾನದ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಪರಮೇಶ್ವರಿ ಕೆ.ಗೌಡ, ತಾ. ಪಂ ಸದಸ್ಯರಾದ ಕೃಷ್ಣಯ್ಯ ಆಚಾರ್ಯ,ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ, ಗ್ರಾ.ಪಂ ಸದಸ್ಯರಾದ ದಿನೇಶ್ ಗೌಡ ಖಂಡಿಗ, ತಾಲೂಕು ಯೋಜನಾಧಿಕಾರಿ ಯಶವಂತ್, ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಜೈವಂತ ಪಾಟ್ಕರ್, ಕಣಿಯೂರು ಘಟಕದ ಸಂಯೋಜಕಿ ಚಂದ್ರಕಲಾ ಮೊಗ್ರು,ಸೇವಾ ಪ್ರತಿನಿಧಿ ನಿರಂಜನ ಗೌಡ,ಪ್ರಶಾಂತ್ ಗೌಡ ನಿರುಂಬುಡ,ಗಿರೀಶ್ ಗೌಡ ಕುಂಬುಡಂಗೆ,ಪುರುಷೋತ್ತಮ ಆಚಾರ್ಯ, ಜಯರಾಮ ಕಲ್ಕಾಡಿ,ರಮೇಶ್ ಮುಂಡೂರು,ನೀಲಯ್ಯ, ಬಾಲಕೃಷ್ಣ, ಲೀಲಾ ಉಪಸ್ಥಿತರಿದ್ದರು.

ಶ್ರಮದಾನಕ್ಕೆ ಚಾ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಪಂಚಾಯತ್ ಕಡೆಯಿಂದ ಮಾಡಲಾಗಿತ್ತು. ಧರ್ಮಸ್ಥಳ ವಿಪತ್ತು ನಿರ್ವಹಣೆ ತಂಡದ ಈ ಸೇವಾ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.