Recent Posts

Tuesday, January 21, 2025
ಹೆಚ್ಚಿನ ಸುದ್ದಿ

ಮೊಗಪ್ಪೆ ಕಟ್ಟದ ನೀರು ಮಲಿನಗೊಳಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ-ಕಹಳೆ ನ್ಯೂಸ್

ಬೆಳ್ಳಾರೆ : ಮೊಗಪ್ಪೆ ಕಟ್ಟಕ್ಕೆ ಕಿಡಿಗೇಡಿಗಳು ಬಿಯರ್ ಮತ್ತು ಇನ್ನಿತರ ಮದ್ಯದ ಬಾಟಲ್ ಗಳನ್ನು ಕುಡಿದು ನೀರಿಗೆ ಬಿಸಾಡುತ್ತಿದ್ದರು. ಈ ಕಾರಣದಿಂದ ಸಾರ್ವಜನಿಕರು ಗ್ರಾಮ ಪಂಚಾಯತ್ ಗೆ ದೂರು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಿಂದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಪನ್ನೆ ಭೇಟಿ ನೀಡಿ ನೀರು ಮಲಿನಗೊಳಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಗೌರಿ ನೆಟ್ಟಾರು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಾವಡಿಬಾಗಿಲು, ಅಕ್ಷಯ ಯುವಕ ಮಂಡಲ ನೆಟ್ಟಾರು ಗೌರವಾಧ್ಯಕ್ಷರಾದ ವೆಂಕಟರಮಣ ಗೌಡ ನೆಟ್ಟಾರು ಮತ್ತು ಶೈಲೇಶ್ ನೆಟ್ಟಾರು ಹಾಗೂ ಅಕ್ಷಯ ಯುವಕ ಮಂಡಲದ ಕೋಶಾಧಿಕಾರಿ ಪ್ರತೀಕ್ ಮೊಗಪ್ಪೆ ಜತೆಗಿದ್ದರು.