Sunday, November 24, 2024
ಹೆಚ್ಚಿನ ಸುದ್ದಿ

ಸಂಸ್ಥಾಪನೋತ್ಸವ – ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ। ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ; ಎಸ್ ಗುರುಮೂರ್ತಿ-ಕಹಳೆ ನ್ಯೂಸ್

ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಬೇರೆಯವರಿಗೆ ಮಾರ್ಗದರ್ಶನ ಮಾಡಿಕೊಂಡು ಬಂದವರು ನಾವು. ನಮ್ಮತನವನ್ನು ಉಳಿಸಿಕೊಳ್ಳಲು ಬ್ರಾಹ್ಮಣರೆಲ್ಲರೂ ಒಗ್ಗಟ್ಟಾಗಿ ನಡೆಯಬೇಕಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್ ಗುರುಮೂರ್ತಿ ಹೇಳಿದರು.


ಜಾಹೀರಾತು
ಜಾಹೀರಾತು
ಜಾಹೀರಾತು

ಹವ್ಯಕ ಮಹಾಸಭೆಯಲ್ಲಿ ನಡೆದ ಸಂಸ್ಥಾಪನೋತ್ಸವ – ವಿಶೇಷ ಪ್ರಶಸ್ತಿ ಪ್ರದಾನ ಹಾಗೂ ಪಲ್ಲವ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಕೇ ಹುಟ್ಟಿದ ಹವ್ಯಕ ಮಹಾಸಭೆಯು ಈ ಎತ್ತರಕ್ಕೆ ಬೆಳೆದಿದೆ. ವಿಶ್ವಮಟ್ಟದ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿದೆ. ನಮ್ಮ ಸಮಾಜವು ನಾಡಿಗಾಗಿ ಮಾಡಿದ ಸೇವೆ ಅನನ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಹಾಗೂ ಕೋವಿಡ್ ಸಂಕಷ್ಟಕಾಲದಲ್ಲಿ ಜನತೆಗೆ ಧೈರ್ಯ ತುಂಬಿದ ಡಾ.ಕಜೆಯವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಮಾತನಾಡಿ, ಇಡೀ ಪ್ರಪಂಚದಲ್ಲಿ ಸುಮಾರು 4 ಲಕ್ಷ ಹವ್ಯಕರಿದ್ದು, ಎಲ್ಲರೂ ವಿದ್ಯಾವಂತರು – ಪ್ರತಿಭಾವಂತರು ಇದ್ದಾರೆ. ಹವ್ಯಕ ಸಮಾಜದಲ್ಲಿ ಎಂತೆಂತಹವರು ಇದ್ದಾರೆ ಎಂದು ಸಮಾಜಕ್ಕೆ ತೋರಿಸುವ ಕೆಲಸವನ್ನು ಮಹಾಸಭೆಯು ಮಾಡುತ್ತಿದೆ. ಇದನ್ನು ಕಂಡು ಅನ್ಯರು ಅನುಸರಿಸುವಂತಾಗಲಿ. ವಿದ್ವಾನ್ ಬಂದಗದ್ದೆ ನಾಗರಾಜರಂತಹವರು ಈ ಶತಮಾನದ ಏಕೈಕ ಮಹಾಕವಿಗಳು. ಅವರು ಯಾರಿಗೂ ಗೋಚರವಾಗದೆ ಇದ್ದಾರೆ. ಅಂಥ ಅನೇಕರು ಸಮಾಜದಲ್ಲಿದ್ದಾರೆ ಅವರನ್ನು ಅನ್ಯರೂ ನೋಡಲಿ ಎಂಬ ಕಾರಣದಿಂದ ದೀಪಶಿಖೆಯಾಗಿ ಈ ಕಾರ್ಯಕ್ರಮ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹವ್ಯಕ ಮಹಾಸಭಾ ಎಂಬುದು ಜಾತಿಯ ಸಂಘಟನೆಯಾಗಿದ್ದರೂ, ಎಲ್ಲ ಸಮುದಾಯಗಳಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಮಹಾಸಭೆ ಸಾಗುತ್ತಿದೆ. ಕೇವಲ ಹವ್ಯಕ ಸಮಾಜಕ್ಕೆ ಸೀಮಿತವಾಗಿ ಕಾರ್ಯಕ್ರಮಗಳನ್ನು ಆಯೋಗಜಿಸದೇ, ಎಲ್ಲಾ ಸಮುದಾಯಗಳ ಉನ್ನತಿಗೆ ಕಾರ್ಯಕ್ರಮಗಳನ್ನು ತರಬೇತಿಗಳನ್ನು ನಡೆಸಲಾಗುತ್ತಿದೆ ಎಂದು ಮಹಾಸಭೆಯ ಕಾರ್ಯಗಳನ್ನು ತಿಳಿಸಿದರು. ಸಂಪರ್ಕಸಾಧನಗಳೇ ದುರ್ಬಲವಾಗಿದ್ದ ಕಾಲದಲ್ಲಿ ಎಲ್ಲ ಪ್ರಾತಿನಿಧಿಕ ಪ್ರಾಂತ್ಯಗಳ ಹವ್ಯಕ ಮುಖಂಡರು ಸ್ವಾತಂತ್ರ್ಯ ಪೂರ್ವದಲ್ಲೇ ಈ ಸಂಘಟನೆಯನ್ನು ಕಟ್ಟಿದ್ದಾರೆ. ಅವರ ದೂರದರ್ಶಿತ್ವ ತುಂಬಾ ದೊಡ್ಡದು ಎಂದು ಮಹಾಸಭೆಯನ್ನು ಕಟ್ಟಿ ಬೆಳೆಸಿದವರನ್ನು ಸ್ಮರಿಸಿದ ಅವರು, ಗಾಯತ್ರೀ ಮಂತ್ರವು ರೋಗ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಎಂಬ ಸಂಶೋಧನೆಯನ್ನು ದೇಶಮಾಡುತ್ತಿದೆ. ಅಂಥ ಮಂತ್ರದ ಆಚರಣೆಯನ್ನು ನಮ್ಮ ಸಮಾಜ ದೃಡವಾಗಿ ಹಿಡಿದಿದೆ ಎಂದು ತಿಳಿಸಿದರು.ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಅಜಕ್ಕಳ ಗಿರೀಶ ಭಟ್ ಮಾತನಾಡಿ, ಹವ್ಯಕ ಸಮಾಜವು ದೈಹಿಕ ದುಡಿಮೆ ಮತ್ತು ಬೌದ್ಧಿಕ ಪರಿಶ್ರಮ ಎರಡರಲ್ಲೂ ಶ್ರೇಷ್ಠತೆಯನ್ನು ಹೊಂದಿದ ಸಮಾಜ. ಆ ಸಮಾಜದ ಪ್ರಾತಿನಿಧಿಕ ಸಂಸ್ಥೆ ಹವ್ಯಕ ಮಹಾಸಭೆ ಪಲ್ಲವ ಪುರಸ್ಕಾರ ಮತ್ತು ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಪ್ರಶಸ್ತಿಗೇ ಗೌರವ ಬರುವಂತೆ ಮಾಡಿದೆ. ಮಹಾಸಭೆಯ ವರ್ಚಸ್ಸೂ ಸಹ ಹೆಚ್ಚುತ್ತದೆ. ಸಮಯ ಶ್ರಮ ಶ್ರದ್ಧೆ ಒಟ್ಟಿಗೆ ಸೇರಿದರೆ ಇಂಥ ಸಾಧಕರು ಹುಟ್ಟುತ್ತಾರೆ. ಇನ್ನೂ ಹೆಚ್ಚು ಪ್ರತಿಭೆಗಳು ಸಾಧನೆಯಾಗಿ ಪರಿವರ್ತಿತವಾಗಲಿ ಎಂದು ಆಶಿಸಿದರು.

ಹವ್ಯಕ ವಿಭೂಷನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ವಿದ್ವಾನ್ ಬಂದಗದ್ದೆ ನಾಗರಾಜರು, ಈ ಪ್ರಶಸ್ತಿ ನನಗೆ ನೀಡಿದ್ದಲ್ಲ, ಇದು ಪರಂಪರೆಗೆ ಕೊಟ್ಟ ಗೌರವ. ಈ ಪರಂಪರೆ ಮುಂದುವರಿಯಬೇಕು ಎಂದು ಹೇಳಿದ ಅವರು, ಗಾಯತ್ರೀಜಪದಿಂದ ಪಾಶ್ರ್ವವಾಯು ಸಮಸ್ಯೆ ಪರಿಹಾರವಾಗಿದೆ. ಬ್ರಾಹ್ಮಣರಿಗೆ ಇದೊಂದು ಮಹತ್ ಔಷಧಿಯಾಗಿದ್ದು, ಗಾಯತ್ರಿಯ ಉಪಾಸನೆ ಸಮಾಜದಲ್ಲಿ ಹೆಚ್ಚೆಚ್ಚು ನಡೆಯುವಂತಾಗಲಿ ಎಂದು ಹಾರೈಸಿದರು. ಹವ್ಯಕ ಭೂಷಣ ಸ್ವೀಕರಿಸಿದ ಕೊಂಡಕುಳಿ ರಾಮಚಂದ್ರ ಹೆಗಡೆ ಮಾತನಾಡಿ,ಸಾಹಿತಿಗೂ ಕಲಾವಿದನಿಗೂ ಆತ್ಮೀಯತೆ ಇದ್ದರೆ ಇಬ್ಬರಿಗೂ ಶ್ರೇಯಸ್ಸು. ಸಾಹಿತಿ ಬರೆದಿದದ್ದನ್ನು ಒಂದೇಬಾರಿಗೆ ಸಾವಿರಾರು ಜನರಿಗೆ ಓದಲಾಗದು. ಕಲಾವಿದನು ಅದನ್ನು ಹಲವರಿಗೆ ಉಣಬಡಿಸಬಹುದು. ಆ ನಿಟ್ಟಿನಲ್ಲಿ ಮಹಾಸಭೆ ನಮ್ಮಂತಹವರನ್ನೂ ಗುರುತಿಸಿ ಗೌರವಿಸಿದೆ. ಸರಕಾರ ಗುರುತಿಸದಿದ್ದರೂ ಮಹಾಸಭೆ ರಾಜಾಶ್ರಯ ನೀಡಿರುವುದು ಹೆಮ್ಮೆಯ ವಿಷಯ ಎಂದರು. ಹವ್ಯಕಭೂಷಣ ಪಡೆದ ಡಾ.ಶ್ಯಾಮ ಸಿ ಭಟ್ ಮಾತನಾಡಿ, ಹವ್ಯಕ ಮಹಾಸಭೆಯ ವಿದ್ಯಾರ್ಥಿ ಪ್ರೋತ್ಸಾಹಧನ ಪಡೆದು ಓದಿದವನು ಎನ್ನಲು ನನಗೆ ಹೆಮ್ಮೆಯಾಗುತ್ತದೆ. ನನ್ನ ಸಹಾಯ ಈ ನಿಟ್ಟಿನಲ್ಲಿ ಮಾಡಲು ಸಿದ್ಧನಿದ್ದೇನೆ. ಹೆಚ್ಚೆಚ್ಚು ಜನರ ವಿದ್ಯಾರ್ಜನೆಗೆ ಸಹಾಯ ಮಾಡೋಣ. ವೈದ್ಯಕೀಯ ಉಪಕರಣಗಳ ಡ್ರಗ್ ಗಳ ಉತ್ಪಾದನೆಗೆ ಈ ಪ್ರಶಸ್ತಿಯು ಸ್ಫೂರ್ತಿಯಾಗಲಿದೆ ಎಂದರು.
ಹವ್ಯಕ ಶ್ರೀಭೂಷಿತ ವೇ|| ಗಜಾನನ ಘನಪಾಠಿಗಳು ಮಾತನಾಡಿ, ಹವ್ಯಕವ್ಯಗಳನ್ನು ಅನುಷ್ಠಾನ ಇಟ್ಟುಕೊಳ್ಳುವ ಸಮಾಜ ನಮ್ಮದು ಅದು ಕೇವಲ ಹೆಸರಿಗೆ ಮಾತ್ರವಾಗದೆ ಅನ್ವರ್ಥಕವಾಗಿ ಇಡೋಣ ಎಂಬ ಕಿವಿಮಾತು ಹೇಳಿದರು. ಕು. ಈಶಾ ಶರ್ಮಾ, ಹವಿಗನ್ನಡದಲ್ಲಿ ಮಾತನಾಡಿ, ಎಲ್ಲ ಸಾಧಕರ ಮುಂದೆ ನಾನು ಅಳಿಲಿನಂತೆ, ಚೆಸ್ ನಲ್ಲಿ ದೇಶದ ಮಹಿಳಾ ಸಾಧಕಿಯರಲ್ಲಿ ಮೊದಲ ಸ್ಥಾನದಲ್ಲಿ ಇದ್ದೇನೆ. ಇದು ಬಹಳ ಕಷ್ಟದ ಕಲೆ ಹಾಗೂ ಆಟ ಆಗಿದೆ. ನನ್ನ ಪಾಲಕರ ಪ್ರೋತ್ಸಾಹ ಅನನ್ಯವಾಗಿದೆ ಅವರಿಗೆ ಎನ್ನ ಪ್ರಶಸ್ತಿ ಸಮರ್ಪಿತ. ಈ ಪುರಸ್ಕಾರವು ಮುಂದಿನ ಸಾಧನೆಗೆ ಪ್ರೋತ್ಸಾಹದಾಯಕ ಎಂದರು.

ಅಭ್ಯಾಯಾಗತರಾದ ಪ್ರಮೋದ ಹೆಗಡೆ ಯಲ್ಲಾಪುರ, ಮಾತನಾಡುತ್ತ, ಇಂತಹ ಕಾರ್ಯಕ್ರಮಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ. ಹವ್ಯಕರನ್ನು ನೋಡಿ ಇತರ ಸಮಾಜವು ಕಲಿಯಬೇಕು ಅಂತಹ ಆದರ್ಶತನವನ್ನು ನಾವು ಉಳಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥಾಪನೋತ್ಸವದ ಹಿನ್ನೆಲೆಯ ಕುರಿತು ಸಂಚಾಲಕ ಮುಗಲೋಡಿ ಕೃಷ್ಣಮೂರ್ತಿಯವರು ಮಾತನಾಡಿ, ಮಹಾಸಭೆಯನ್ನು ಸಂಸ್ಥಾಪಿಸಿದವರು ಹಾಗೂ ಕಟ್ಟಿಬೆಳೆಸಿದ ಹಿರಿಯರನ್ನು ನೆನಪಿಸಿಕೊಂಡರು ಹಾಗೂ ಆ ಕುರಿತಾದ ಕಿರುಚಿತ್ರ ಪ್ರದರ್ಶನ ನಡೆಯಿತು. ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಯಿತು. ಯಕ್ಷಸಂಸ್ಕಾರ ಮಾಲಿಕೆಯಲ್ಲಿ ತರಬೇತಿ ನೀಡಿದ ತೋಟಿಮನೆ ಗಣಪತಿಯವರಿಗೆ ಮಹಾಸಭೆಯ ಗೌರವವನ್ನು ನೀಡಲಾಯಿತು. ತರಬೇತಿಯಲ್ಲಿ ಸಹಕರಿಸಿದ ಪ್ರಸನ್ನ ಹೆಗಡೆ, ಹವ್ಯಕ ಮಂಜು, ಸಂಚಾಲಕ ಎನ್.ಎಂ.ಹೆಗಡೆ ಅವರನ್ನೂ ನೆನಪಿಸಿಕೊಳ್ಳಲಾಯಿತು. ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ ಸ್ವಾಗತಿಸಿದರು. ನಾರಾಯಣ ಭಟ್ಟ, ಡಾ. ಮಮತಾ, ಶ್ರೀಕಾಂತ ಹೆಗಡೆ, ವಿನಯ ಬೆಳೆಯೂರು, ವಿನಾಯಕ ಮಧ್ಯಸ್ಥ ಪ್ರಶಸ್ತಿಪತ್ರಗಳನ್ನು ವಾಚಿಸಿದರು. ಮೋಹನ ಹೆಗಡೆ ಮತ್ತು ಕೃಷ್ಣಾನಂದ ಶರ್ಮಾ ನಿರೂಪಿಸಿದರು. ಸಂಚಾಲಕರಾದ ರವಿನಾರಾಯಣ ಪಟ್ಟಾಜೆ ವಂದಸಿದರು. ಮಹಾಸಭೆಯ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.