Wednesday, January 22, 2025
ಪುತ್ತೂರು

ನಿವೃತ IAS ಅಧಿಕಾರಿ ವಿ. ವಿ. ಭಟ್ ಅವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರದ್ಧಾಂಜಲಿ-ಕಹಳೆ ನ್ಯೂಸ್

ಪುತ್ತೂರು : ಇತ್ತೀಚಿಗೆ ನಿಧನ ಹೊಂದಿದ ನಿವೃತ IAS ಅಧಿಕಾರಿ ವಿ. ವಿ. ಭಟ್ ಅವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ವತಿಯಿಂದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಮಾತನಾಡಿ, ವಿ.ವಿ. ಭಟ್ ಇವರು ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮಾತ್ರವಲ್ಲ ರ್ಯಾಂಕ್ ಗಳಿಸಿದ ವಿದ್ಯಾರ್ಥಿ. ಭಾರತೀಯ ನಾಗರಿಕ ಸೇವೆಗಳಿಗೆ ನಡೆಸುವ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ ಪ್ರತಿಭಾನ್ವಿತರು. ಅವರು ವಹಿಸಿಕೊಂಡ ಹುದ್ದೆಗಳಲ್ಲಿ ಅವರು ಭ್ರಷ್ಟಾಚಾರ ರಹಿತ ನ್ಯಾಯಯುತವಾದ ಆಡಳಿತವನ್ನು ನಡೆಸಿದವರು. ಅಂಡಮಾನ್‍ನಿಕೋಬಾರ್‍ನ ಜಿಲ್ಲಾಧಿಕಾರಿ ಆಗಿದ್ದ ವೇಳೆ ಸುನಾಮಿ ಬಂದು ಭಾರೀ ದುರಂತವಾಗಿತ್ತು. ಆ ದುರಂತವನ್ನು ಅತ್ಯಂತ ಒಳ್ಳೆಯ ರೀತಿಯಲ್ಲಿ ನಿಭಾಯಿಸಿದ ದಕ್ಷ ಆಡಳಿತಗಾರ ಎಂದು ನುಡಿದರು. ವಿ.ವಿ. ಭಟ್‍ರವರು ಕೇವಲ IAS ಅಧಿಕಾರಿ ಮಾತ್ರವಲ್ಲ ಅವರು ಗಳಿಸಿದ ಜ್ಞಾನ ಅಪಾರವಾದದು. ವಿಜ್ಞಾನ, ಜೀವವೈವಿದ್ಯ ಮುಂತಾದ ಕ್ಷೇತ್ರಗಳಲ್ಲಿ ಆಳವಾದ ಹಾಗೂ ವಿಸ್ತಾರವಾದ ಜ್ಞಾನ ಹೊಂದಿದ್ದರು.

ದೆಹಲಿಯ ಸರಕಾರದ ಹಣಕಾಸು ಮಂತ್ರಾಲಯದ ಮುಖ್ಯ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಅವರೊಬ್ಬ ಸ್ವರ್ಶಮಣ ಇದ್ದ ಹಾಗೆ. ಅವರಲ್ಲಿ ಯಾವ ವಿಷಯದ ಬಗ್ಗೆ ಮಾಹಿತಿ ಮಾರ್ಗದರ್ಶನ ಕೇಳಿದರೂ ಅವರುಅತ್ಯಂತ ಸಮರ್ಪಕ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಸಂsಸ್ಕøತ ಅಧ್ಯಯನ ನಡೆಸಿ ವೇದ, ಮೀಮಾಂಸೆಗಳನ್ನು ಕಲಿತ್ತಿದ್ದರು. ಅವರೊಬ್ಬ Encyclopedia ಇದ್ದ ಹಾಗೆ ಎಂದರು. ವಿವೇಕಾನಂದ ಸಂಸ್ಥೆಗಳ ಸಲಹಾ ಮಂಡಳಿಯ ಸದಸ್ಯರಾಗಿ, ವಿವೇಕಾನಂದ ಸೆಂಟರ್ ಫಾರ್‍ರಿಸರ್ಚ್ ಸ್ಟಡೀಸ್‍ನ ಕಾರ್ಯಾಧ್ಯಕ್ಷರಾಗಿ, ವಿವೇಕಾನಂದ ಇಂಜಿನೀಯರಿಂಗ್ ಕಾಲೇಜಿನ ಸಲಹಾ ಸಮಿತಿಯ ಅಧ್ಯಕ್ಷರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಅವರಅಗಲುವಿಕೆಯಿಂದ ವಿವೇಕಾನಂದ ಸಂಸ್ಥೆಯ ಕಿರೀಟದಿಂದ ರತ್ನವೊಂದು ಕಳಚಿಕೊಂಡಿದೆ. ಅವರಿತ್ತ ಸಲಗೆಯನ್ನು ಅನುಷ್ಟಾನ ಮಾಡುವುದೇ ಅವರ ಆತ್ಮಕ್ಕೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಅಭಿಪ್ರಾಯಪಟ್ಟರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಸ್ವಾಗತಿಸಿ ವಿ.ವಿ.ಭಟ್ ಇವರ ಕುರಿತು ಮಾತನಾಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಡಾ. ಸುಧಾ ಎಸ್. ರಾವ್ ನಿರ್ದೇಶಕರುಗಳಾದ ಶಿವಪ್ರಸಾದ್ ಇ, ಬಲರಾಮ ಆಚಾರ್ಯ, ವಾಮನ ಪೈ ಪಿ, ವಿವೇಕಾನಂದ ಇಂಜಿನೀಯರಿಂಗ್ ಕಾಲೇಜಿನ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ವಿವೇಕಾನಂದ ಪದವಿ ಕಾಲೇಜಿನ ಅಧ್ಯಕ್ಷ ಶ್ರೀನಿವಾಸ್ ಪೈ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಪ್ರಸನ್ನ ಎನ್ ಭಟ್, ಸಂಚಾಲಕ ಮಹಾದೇವ ಶಾಸ್ತ್ರಿ ,ವಿವೇಕಾನಂದ ಕಾನೂನು ಕಾಲೇಜಿನ ಅಧ್ಯಕ್ಷ ಬಂಗಾರಡ್ಕ ವಿಶ್ವೇಶ್ವರ ಭಟ್, ಸಂಚಾಲಕ ವಿಜಯನಾರಾಯಣ, ವಿವೇಕಾನಂದ ಪದವಿ ಪೂರ್ವಕಾಲೇಜಿನ ಅಧ್ಯಕ್ಷ ರವೀಂದ್ರ ಪಿ, ವಿವೇಕಾನಂದ ಬಿ.ಎಡ್‍ಕಾಲೇಜಿನ ಅಧ್ಯಕ್ಷ ಪ್ರೊ. ಎ. ವಿ. ನಾರಾಯಣ, ವಿವೇಕಾನಂದ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಾದ ಪ್ರೊ. ವಿಷ್ಣು ಗಣಪತಿ ಭಟ್, ಡಾ ಮಹೇಶ್ ಪ್ರಸನ್ನ, ಪ್ರಸಾದ್ ಶ್ಯಾನುಬೋಗ್, ಗೋಪಿನಾಥ್ ಶೆಟ್ಟಿ, ಅಕ್ಷತಾ, ಡಾ. ಶೋಭಿತಾ ಸತೀಶ್, ಮುಖ್ಯೋಪಾದ್ಯಾಯರಾದ ಸತೀಶ್‍ಕುಮಾರ್‍ರೈ, ಆಶಾ ಬೆಳ್ಳಾರೆ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್‍ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ಮೊದಲಾದವರು ಉಪಸ್ಥಿತರಿದ್ದರು. ವಿವೇಕಾನಂದ ವಸತಿ ನಿಲಯದ ಕಾರ್ಯದರ್ಶಿ ಅಚ್ಯುತ ನಾಯಕ್ ಗೀತಾಂಜಲಿ ಸಮರ್ಪಿಸಿದರು. ನಂತರ ವಿ. ವಿ. ಭಟ್‍ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಲಾಯಿತು