ಪುತ್ತೂರು : ಮಂಗಳೂರು ವಿಶ್ವ ವಿದ್ಯಾನಿಲಯದ 2020 ಸೆಪ್ಟೆಂಬರ್‌ನಲ್ಲಿ ನಡೆಸಿದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿಗೆ ಮೂರು ಪ್ರಥಮ ರ‍್ಯಾಂಕ್ ಗಳು ಲಭ್ಯವಾಗಿದೆ.
ಬಿಎಸ್ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ಅನನ್ಯ ಪಾಂಗಳ್ ಫಸ್ಟ್ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ. ಇವರು 5000ಕ್ಕೆ 4879 ಅಂಕಗಳನ್ನು ಪಡೆದಿರುತ್ತಾರೆ. ಇವರು ದಿನೇಶ್ ಪಾಂಗಳ್ ಹಾಗೂ ಸಂದ್ಯಾ ದಂಪತಿಗಳ ಪುತ್ರಿ. ಎಂ.ಎ. ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ಸುಷ್ಮಾ ಎಂ.ಎಸ್. ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಸುಷ್ಮಾ ಅವರು ಎಂಸಿಜೆ ಪರೀಕ್ಷೆಯಲ್ಲಿ ಒಟ್ಟು ಗ್ರೇಡ್ ಪಾಯಿಂಟ್ 10ರಲ್ಲಿ 8.07 ಅಂಕ ಗಳಿಸಿರುತ್ತಾರೆ.
ಇವರಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ, ರಾಮಕೃಷ್ಣ ಮಲ್ಯ ಚಿನ್ನದ ಪದಕ, ಪಬ್ಲಿಕ್ ರಿಲೇಶನ್ ಸೊಸೈಟಿ ಆಫ್ ಇಂಡಿಯಾ ನಗದು ಬಹುಮಾನ ಹಾಗೂ ದಕ್ಷಿಣ ಕನ್ನಡ ಮಕ್ಕಳ ಚಲನಚಿತ್ರೋತ್ಸವ 1988 ಬಹುಮಾನಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸದಾಶಿವ ಹಾಗೂ ಸವಿತಾ ದಂಪತಿಗಳ ಪುತ್ರಿ. ಎಂ.ಎಸ್ಸಿ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ತೇಜಶ್ರೀ ಎಂ. ಅವರು ಫಸ್ಟ್ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ. ತೇಜಶ್ರೀ ಅವರು ಎಂ.ಎಸ್ಸಿ. (ರಸಾಯನ ಶಾಸ್ತ್ರ) ಪರೀಕ್ಷೆಯಲ್ಲಿ ಒಟ್ಟು ಗ್ರೇಡ್ ಪಾಯಿಂಟ್ 10ರಲ್ಲಿ 8.32ಅಂಕ ಪಡೆದು ಪ್ರಥಮ ರ‍್ಯಾಂಕ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಇವರು ಪ್ರೊ. ಬಿ. ಶಿವರಾಮ ಹೊಳ್ಳ ಚಿನ್ನದ ಪದಕ, ಡಾ. ಎ.ಎಮ್. ಅಬ್ದುಲ್ ಖಾದರ್ ಚಿನ್ನದ ಪದಕ ಹಾಗೂ ಪ್ರೊ. ಎಂ. ಆರ್. ಗಜೇಂದ್ರಗಡ್ ನಗದು ಬಹುಮಾನಕ್ಕೂ ಆಯ್ಕೆಯಾಗಿದ್ದಾರೆ. ಇವರು ಶ್ಯಾಮ ಪ್ರಸಾದ್ ಎಂ ಮತ್ತು ರಾಜೇಶ್ವರಿ ದಂಪತಿಗಳ ಪುತ್ರಿ.