ಬಿಳ್ಳೂರುನಲ್ಲಿ ಉಚಿತ ಡಿಜಿಟಲ್ ಸೇವಾ ಕೇಂದ್ರ ಆರಂಭ ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಯವರಿಂದ ಲೋಕಾರ್ಪಣೆ –ಕಹಳೆ ನ್ಯೂಸ್
ಬಾಗೇಪಲ್ಲಿ : ‘ಆಧಾರ್, ಪಡಿತರ ಚೀಟಿಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ಆನ್‍ಲೈನ್ ಆಗಿರುವುದರಿಂದ, ಜನರಿಗೆ ಅನುಕೂಲ ಕಲ್ಪಿಸಲು ತಮ್ಮ ಟ್ರಸ್ಟ್‍ನಿಂದ ಬಿಳ್ಳೂರು ಗ್ರಾಮದಲ್ಲಿ ಉಚಿತವಾಗಿ ಡಿಜಿಟಲ್ ಸೇವಾಕೇಂದ್ರ ಆರಂಭಿಸಲಾಗಿದೆ’ ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಅವರು ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ ಡಿಜಿಟಲ್ ಸೇವಾಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪಡೆಯಲು, ವಿದ್ಯಾರ್ಥಿ ವೇತನ, ಪಹಣಿ, ಆಧಾರ್, ಪಡಿತರ ಚೀಟಿಗಳು ಸೇರಿದಂತೆ ಹಾಗೂ ಉದ್ಯೋಗಾವಕಾಶಗಳು ಪಡೆಯಲು ಆನ್‍ಲೈನ್ ಡಿಜಿಟಲ್ ಆಗಿ ಪರಿವರ್ತನೆ ಮಾಡಿದ್ದು, ಆನ್‍ಲೈನ್‍ನಲ್ಲಿ ಅರ್ಜಿಗಳು ಪಡೆಯಬೇಕಾಗಿದೆ. ತಾಲೂಕಿನ ಕಚೇರಿ, ಪಂಚಾಯಿತಿಗಳಲ್ಲಿ ವಿವಿಧ ಕೆಲಸಗಳಿಗೆ ಹಾಗೂ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಕೆಲಸಗಳು ಬಿಟ್ಟು ಕಾಯಬೇಕಾಗಿದೆ.
ಅರ್ಜಿಗಳು ಪಡೆಯಲು ಸಾಲುಗಟ್ಟಿ ನಿಲ್ಲಬೇಕಾಗಿದೆ. ಇದರಿಂದ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ’ ಆದ್ದರಿಂದ ಬಡವರು , ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು ಎಲ್ಲಾ ವರ್ಗದವರು ಈ ಡಿಜಿಟಲ್ ಸೇವಾ ಕೇಂದ್ರಲ್ಲಿ ಉಚಿತವಾಗಿ ಸೌಲಭ್ಯಗಳನ್ನು ಪಡೆಯಬಹುದು ಎಂದು ಹೇಳಿದರು. ತದನಂತರ ವಿವಿಧ ಪಕ್ಷಗಳಿಂದ ಅನೇಕ ನಾಯಕರು ಜನಪ್ರಿಯ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಸಾಧನೆಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಚ್. ಎಸ್. ನರೇಂದ್ರ, ಬಿ.ವಿ.ವೆಂಕಟರವಣ, ಪಿ.ಎಸ್.ಸುಬ್ಬಾರೆಡ್ಡಿ ಚಂದ್ರಶೇಖರ ರೆಡ್ಡಿ ಲಕ್ಷ್ಮೀಪತಿ ರೆಡ್ಡಿ, ವಿಶ್ವನಾಥ ರೆಡ್ಡಿ ಗಂಗುಲಪ್ಪ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.