Saturday, November 23, 2024
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಪಬ್ ಜೀ ಸದ್ದು, ತಲೆಕೂದಲನ್ನು ವಿಕಾರವಾಗಿ ಕತ್ತರಿಸಿಕೊಂಡ ವಿದ್ಯಾರ್ಥಿ-ಕಹಳೆ ನ್ಯೂಸ್

ಉಪ್ಪಿನಂಗಡಿ : ಮಂಗಳೂರಿನಲ್ಲಿ ಪಬ್ ಜಿ ಮಾದರಿಯ ಗೇಮ್ ಸಂಬಂಧಿಸಿದಂತೆ ಬಾಲಕ ಕೊಲೆ ನಡೆದ ಬಳಿಕ ಇದೀಗ ಪ್ರೌಢ ಶಾಲಾ ವಿದ್ಯಾರ್ಥಿಯೊಬ್ಬ ಅದೇ ಮಾದರಿಯ ಗೇಮ್ ಆಡಿ ತಲೆಗೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾಸಗಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ತಲೆಕೂದಲು ವಿಕಾರವಾಗಿ ಕತ್ತರಿಸಿರುವುದನ್ನು ಹೆತ್ತವರು ಗಮನಿಸಿ ಪ್ರಶ್ನಿಸಿದಾಗ ಮೊದಲಿಗೆ ಬೇರೆ ಹುಡುಗರು ಬಲವಂತದಿಂದ ಮಾಡಿದ್ದಾರೆ ಎಂದು ಹೇಳಿದ್ದ. ನಂತರ ಈ ಕುರಿತು ಮತ್ತಷ್ಟು ವಿಚಾರಿಸಿ ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ಬಂದಾಗ , ತಾನು ಆನ್ ಲೈನ್ ನಲ್ಲಿ ಆಟ ಆಡುತ್ತಾ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ಇದರಿಂದ ಭಯಗೊಂಡು ಕಂಗಾಲಾದ ಪೋಷಕರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬಾಲಕನ ಸಹವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು