Saturday, February 1, 2025
ಬಂಟ್ವಾಳ

ಸಾರಿಗೆ ಸಂಚಾರ ಬಂದ್ ಹಿನ್ನಲೆ ಖಾಸಗಿ ಬಸ್, ಕ್ಯಾಬ್‍ಗಳತ್ತ ಬಂಟ್ವಾಳದ ಜನತೆ- ಕಹಳೆ ನ್ಯೂಸ್

ಬಂಟ್ವಾಳ : ಸಾರಿಗೆ ನೌಕರರ ಮುಷ್ಕರದ ಪರಿಣಾಮ ಕೆಎಸ್‍ಆರ್‍ಟಿಸಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು, ಜನಸಮಾನ್ಯರು ಖಾಸಗಿ ಬಸ್ಸುಗಳು ಮತ್ತು ಇತರ ವಾಹನಗಳ ಮೊರೆಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಹಾಗಾಗಿ ಹೆಚ್ಚಿನ ತೊಂದರೆ ಕಂಡುಬಂದಿಲ್ಲ. ಆದರೆ ಓಡಾಟ ನಡೆಸುವ ಬಸ್ಸುಗಳಲ್ಲಿ ಹೆಚ್ಚಿನ ಜನಸಂಖ್ಯೆ ಕಂಡುಬಂದಿದೆ. ಪುತ್ತೂರು, ವಿಟ್ಲ, ಉಪ್ಪಿನಂಗಡಿ ಭಾಗಕ್ಕೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳಿದ್ದರೆ, ಬಿ.ಸಿ.ರೋಡಿನಿಂದ ಧರ್ಮಸ್ಥಳ ರಸ್ತೆಯ ಪುಂಜಾಲಕಟ್ಟೆ, ಮಡ್ಯಂತಾರು ಭಾಗಕ್ಕೆ ಕಾರು, ಮ್ಯಾಕ್ಸಿಕ್ಯಾಬ್ ನಂತಹ ವಾಹನಗಳು ಓಡಾಡುತ್ತಿದ್ದು, ಕೆಎಸ್‍ಆರ್ ಟಿಸಿ ಬಿ.ಸಿ.ರೋಡು ಡಿಪೋದಿಂದ ಯಾವುದೇ ಬಸ್ಸುಗಳು ಓಡಾಟ ನಡೆಸಿಲ್ಲ. ಆದರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಜನತೆ ನಿತ್ಯವೂ ಖಾಸಗಿ ಬಸ್ಸುಗಳನ್ನೇ ಅವಲಂಬಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು