ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲ್ಲೆಗೌಡನಹಳ್ಳಿ ಕಾಲನಿಯಲ್ಲಿ ಮಾರಕಾಸ್ತ್ರಗಳಿಂದ ಹಸುವಿನ ಹೊಟ್ಟೆ ಸೀಳಿ, ಕಿವಿ-ಬಾಲ ಕೊಯ್ದು ವಾಮಾಚಾರ! ಬೆಚ್ಚಿಬಿದ್ದ ಸ್ಥಳೀಯರು-ಕಹಳೆ ನ್ಯೂಸ್
ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲ್ಲೆಗೌಡನಹಳ್ಳಿ ಕಾಲನಿಯಲ್ಲಿ ಮಾರಕಾಸ್ತ್ರಗಳಿಂದ ಹಸುವಿನ ಹೊಟ್ಟೆ ಬಗೆದು, ಕಿವಿ ಮತ್ತು ಬಾಲ ಕತ್ತರಿಸಿ, ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಅಷ್ಟಕ್ಕೂ ಇಂತಹ ಅಮಾನವೀಯ ಘಟನೆ ನಡೆದಿರುವುದು ವಾಮಾಚಾರಕ್ಕಂತೆ! ಈ ಭೀಕರ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯಿಂದ ಗೋಪಾಲಪ್ಪ ಎಂಬುವರಿಗೆ ಸೇರಿದ ಒಂದೂವರೆ ವರ್ಷದ ಹಸು ಬಲಿಯಾಗಿದ್ದು, ಹಸುವನ್ನ ಅಮಾನುಷವಾಗಿ ಕೊಂದು ಗೋಡೆ ಮೇಲೆ ರಕ್ತದಿಂದ ಚಿತ್ತಾರ ಬಿಡಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕಳೆದ ಭಾನುವಾರವೂ ಇದೇ ಮನೆಯಲ್ಲಿ ಪಾತಕಿಗಳು ಮತ್ತೊಂದು ಹಸುವಿನ ಕುತ್ತಿಗೆಯನ್ನ ಮುರಿದು ಕೊಲೆ ಮಾಡಿದ್ದರು. ಮಂಗಳವಾರ ತಡರಾತ್ರಿ ಇನ್ನೊಂದು ಹಸುವನ್ನ ಭೀಕರವಾಗಿ ಹತ್ಯೆ ಮಾಡಿದ್ದು, ಮೇಲ್ನೋಟಕ್ಕೆ ವಾಮಾಚಾರ, ಮಾಟಮಂತ್ರಕ್ಕಾಗಿ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಹಾಗೂ ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.