ಕರ್ನಾಟಕ ಲಗೋರಿ ಅಸೋಸಿಯೇಷನ್ ಅಸ್ತಿತ್ವಕ್ಕೆ ಶ್ರೀ ದೊಡ್ಡಣ್ಣ ಬರೆಮೇಲು ಅಧ್ಯಕ್ಷರಾಗಿ ಆಯ್ಕೆ-ಕಹಳೆ ನ್ಯೂಸ್
ಲಗೋರಿ ಆಟ ಮಕ್ಕಳ ಜಾಣ್ಮೆ, ಚಾತುರ್ಯ, ಧೈರ್ಯ ಶಕ್ತಿ, ಮತ್ತು ಕುತೂಹಲ ದೃಷ್ಟಿಗೆ ಅನುಗುಣವಾದ ಆಟವಾಗಿದ್ದು. ಈಗಿನ ಸಂದರ್ಭದಲ್ಲಿ ಈ ಆಟದ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಪಠ್ಯಪುಸ್ತಕದ ವಿಷಯವಾಗಿ ಆಗಬೇಕಿದೆ ಎಂದು ಕರ್ನಾಟಕ ಲಗೋರಿ ಅಸೋಸಿಯೇಷನ್ ಉಪಾಧ್ಯಕ್ಷರು, ಡಾ.ದೇವಿಪ್ರಸಾದ್ ಬೊಲ್ಮ ಧರ್ಮಸ್ಥಳ ಹೇಳಿದರು.
ಲಗೋರಿ ಎಂಬುದು ಭಾರತದ ಒಂದು ಜಾನಪದ ಕ್ರೀಡೆಯಾಗಿದೆ. ಇದು ಹೊರಾಂಗಣ ಆಟವಾಗಿದೆ. ಇದು ನಾಲ್ಕು ಮತ್ತು ಹೆಚ್ಚು ಜನ ಆಡುವ ಆಟ. ಇದಕ್ಕೆ ಬೇಕಾದ ಪರಿಕರಗಳೆಂದರೆ, ಚೆಂಡು, ಚಪ್ಪಟೆ ಕಲ್ಲುಗಳು ಇತ್ಯಾದಿ. ಸರಳವಾದ ಆಟವನ್ನು ಸಮಯದ ಮಿತಿ ಇಲ್ಲದೆ ಆಡಬಹುದು. ಲಗೋರಿ ಇದು ಕೇರಳದಲ್ಲಿ ಆಡುವ ಡಬ್ಬಾಕಲಿ ಆಟ, ಆಟಗಾರರು ನಾಲ್ಕು ಅಥವಾ ಹೆಚ್ಚು ಜನ ವಯಸ್ಸಿನ ವ್ಯಾಪ್ತಿ ಯಾವುದೇ ವಯಸ್ಸು ಪ್ರಾರಂಭಕ್ಕೆ ಬೇಕಾದ ಕಾಲ ನಿಮಿಷಕ್ಕಿಂತ ಕಡಿಮೆ ಆಟದ ಸಮಯ ಮಿತಿ ಇಲ್ಲ, ಯಾದೃಚ್ಛಿಕ ಅವಕಾಶ, ಅಲ್ಪ, ಬೇಕಾದ ನೈಪುಣ್ಯತೆಗಳು, ಓಟ, ವೀಕ್ಷಣೆ, ವೇಗ, ಬಲ, ಎಸೆತ, ವಿವಿಧ ಹೆಸರು ಸಂಪಾದಿಸಿ ದೇಶದ ಇತರ ಭಾಗಗಳಲ್ಲಿ, ಇದೇ ಆಟವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
ಲಿಂಗೋರ್ಚ, ಲಗೋರಿ (ಮಹಾರಾಷ್ಟ್ರ) ಪಿತ್ತು (ಹರ್ಯಾಣ, ಪಂಜಾಬ್, ಚಂಡೀಘಢ ಹಾಗೂ ಉತ್ತರ ರಾಜಸ್ತಾನ) ಸೈಟೋಲಿಯ (ರಾಜಸ್ಥಾನ, ಬಿಹಾರ) ಸಾತೋಡಿಯು (ಗುಜರಾತ್) ಪಿತ್ತು (ಪಶ್ಚಿಮ ಬಂಗಾಳ, ಬಿಹಾರ) ಬಮ್ ಪಿತ್ತೋ (ಬಿಹಾರ) ಎಡು ಪೆಂಕುಳತ, ಡಿಕೋರಿ ಅಥವಾ ಪಿತ್ತು (ಆಂಧ್ರಪ್ರದೇಶ) ಡಬ್ಬಾ ಕಲಿ (ಕೇರಳ, ತೆಂಗಿನ ಎಲೆಗಳು ಮಾಡಿದ್ದ ಚೆಂಡನ್ನು ಬಳಸಿ ಆಡಲಾಗುತ್ತದೆ) ಎಜ್ಹು ಕಲ್ಲು (ತಮಿಳುನಾಡು) ಗರ್ಮಾನ್ (ಕಾಶ್ಮೀರ) ಆಡುವ ಕ್ರಮ ಸಂಪಾದಿಸಿ ಮನೆಯಂಗಳದಲ್ಲೋ, ಗದ್ದೆ ಬಯಲುಗಳಲ್ಲೋ ಹತ್ತಾರು ಮಕ್ಕಳು ಒಟ್ಟು ಸೇರಿದಾಗ ಹೆಂಚು ತುಂಡು, ಗೆರಟೆ, ಅಥವಾ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೆ ಒಂದು ಇಟ್ಟು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ರಬ್ಬರ್ ಚೆಂಡು, ಅಲ್ಲದಿದ್ದರೆ ಹುಲ್ಲನ್ನು ಮುದ್ದೆಯಾಗಿ ಮಾಡಿ ಮೇಲೆ ಕಾಗದ ಸುತ್ತಿ ಬಾಳೆಗಿಡದ ಒಣಗಿದ ಹಗ್ಗವನ್ನು ನೀರಿನಲ್ಲಿ ಮುಳುಗಿಸಿ, ತೇವ ಮಾಡಿ ಅದನ್ನು ಗಟ್ಟಿಯಾಗಿ ಸುತ್ತಿ ಚೆಂಡು ಮಾಡಿ ಲಗೋರಿ ಪ್ರಾರಂಭವಾಗುತ್ತಿತ್ತು. ಹೀಗೆ ಮಾನವ ತನ್ನ ಬೌದ್ಧಿಕ ಶಕ್ತಿಯಿಂದ ಅದಕ್ಕೂಂದು ರೂಪಕೊಟ್ಟು ಆಡುವ ಆಟಗಳೇ ಜಾನಪದ ಕ್ರೀಡೆಗಳಾಗಿ ಬೆಳದು ಬಂದವು ಹಳ್ಳಿಯಲ್ಲಿ ಆಟದ ವಿಶೇಷತೆಗಳ ಬಗ್ಗೆ ಪ್ರದೇಶಗಳಿಗೆ ಹೊಂದಿಕೊಂಡಂತೆ ಆಟಗಳನ್ನು ಆಡುವುದನ್ನು ನೋಡುತ್ತೇವೆ. ಈ ದೃಷ್ಟಿಯಿಂದ ಜನಪದದಿಂದ ಮರೆಯಾಗುತ್ತಿರುವ ಆಟಗಳಲ್ಲಿ ಒಂದು.
ಲಗೋರಿ ಆಟದ ನಿಯಮಗಳು, ಸಂಪಾದಿಸಿ ನಿಯಮಗಳನ್ನು ಪಾಲಿಸಿ ಆಡಬೇಕಾಗುತ್ತದೆ ಅದರಲ್ಲಿ ಕೆಲವುಗಳು ಯಾವುದೆಂದರೆ ಆಟದ ಅಂಗಣ, ಅಂಗಣವನ್ನು ಅದಿಕಾರಿಗಳು ಪರಿಶೀಲಿಸುವುದು, ಅದಕ್ಕೆ ಉಪಹೋಗಿಸುವ ಸೂಕ್ತವಾದ ಸಲಕರಣೆಗಳು ಮತ್ತು ಅಂಗಣ ರಚಿಸುವುದು. ವಿವಿಧ ನಿಯಮಗಳು ಬಿಲ್ಡರ್ಸ್ ಹಾಗೂ ಫೀಲ್ಡರ್ಸ್ ನಿಯಮಗಳು ಆಟಗಾರರ ಬದಲಾವಣೆ ಪೌಲ್ಸ್(ತಪ್ಪುಗಳು), ದಂಡನೆ, ಟೈ(ಅಂಕ ಸಮವಾದಾಗ) ನಿಯಮಗಳನ್ನು ಲಗೋರಿ ಒಳಗೊಂಡಿದೆ. ಮೈದಾನದಲ್ಲಿ ಆಡುವ ಆಟ ಎರಡು ತಂಡಗಳಿರುತ್ತವೆ. ಎರಡೂ ಗುಂಪಿನವರು ಕ್ರಿಕೆಟ್ ರಬ್ಬರ್ ಚೆಂಡನ್ನು ಹೆಚ್ಚಾಗಿ ಆಟಕ್ಕೆ ಬಳಸುತ್ತಾರೆ. ಕ್ರೀಡೆಯ ಮಹತ್ವ ಸಂಪಾದಿಸಿ ಭಾರತ ಶ್ರೀಮಂತ ಸಂಸ್ಕøತಿಯನ್ನು ಹೊಂದಿದ ರಾಷ್ಟ್ರ ಭಾರತೀಯರ ಒಂದೊಂದು ಆಚರಣೆಯ ಹಿಂದೆ ತನ್ನದ್ದೇ ಆದ ಒಂದು ಇತಿಹಾಸವಿದೆ. ನದಿ ಕಣಿವೆಗಳಲ್ಲಿ ಮಾನವ ಸಂಸ್ಕೃತಿ ಅರಳಿದಾಗ ಕ್ರೀಡೆಗೂ ಪ್ರಾಧ್ಯಾನತೆ ದೊರೆಯಿತು. ಇಂದು ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗವಾಗಿ ಹೋಗಿದೆ. ಕ್ರೀಡೆ ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಔಷಧಿಯೂ ಕೂಡ. ಮನೆಯಂಗಳದಲ್ಲಿ ಗದ್ದೆ ಬಯಲುಗಳಲ್ಲಿ ಆಡತಕ್ಕ ಲಗೋರಿ ಆಟಕ್ಕೆ ನಿಯಮಗಳ ಪುಸ್ತಕ ಬರೆದು ಇಂದು ರಾಜ್ಯಾದ್ಯಂತ ಪ್ರಕಟಗೊಂಡಿದೆ. ಇತರ ಆಟಗಳ ಸಾಲಿನಲ್ಲಿ ಇರ ತಕ್ಕ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಆಟ ಇಂದು ಆಗಾಧವಾಗಿ ಬೆಳೆದಿದೆ. 1998 ರಲ್ಲಿ ನಿಯಮ ಬರೆಯಲು ಆರಂಭಿಸಿ ಈ ನಿಯಮದ ಮೊತ್ತಮೊದಲ ಪಂದ್ಯಾಟವನ್ನು ಕಾಯರ್ತೋಡಿ ಮಿತ್ರ ಬಳಗದವರು ಆಯೋಜನೆ ಮಾಡಿದ್ದು. ನಂತರದ ದಿನಗಳಲ್ಲಿ ಸತತ ಎರಡು ವರ್ಷಗಳ ಸಂಶೋಧನೆಯ ಫಲವಾಗಿ ಪುಸ್ತಕರೂಪದಲ್ಲಿ 2001 ರಲ್ಲಿ ಪಯಸ್ವಿನಿ ಕ್ರೀಡಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ಡಾ11 ಕುರುಂಜಿ ವೆಂಕಟ್ರಮಣ ಗೌಡರು ಹಾಗೂ ಆಗಿನ ಪುತ್ತೂರು ಶಾಸಕರಾದ ಶ್ರೀ ಡಿ.ವಿ.ಸದಾನಂದ ಗೌಡರು ಮತ್ತು ಸುಳ್ಯ ಶಾಸಕರಾದ ಶ್ರೀ ಎಸ್ ಅಂಗಾರರ ನೇತೃತ್ವದಲ್ಲಿ ಸುಳ್ಯದಲ್ಲಿ ಬಿಡುಗಡೆಹೊಂದಿ ಮೊತ್ತಮೊದಲ ಕ್ರೀಡಾಕೂಟ ಸುಳ್ಯ ಕೆ.ವಿ.ಜಿ. ಕ್ರೀಡಾಂಗಣದಲ್ಲಿ ನಡೆಯಿತು, 2009ರ ವಿಶ್ವ ತುಳು ಸಮ್ಮೇಳನದಲ್ಲಿ ಇತರ ಜಾನಪದ ಕ್ರೀಡೆಗಳೊಂದಿಗೆ ಮುಖ್ಯ ಆಟವಾಗಿ ನಡೆಸಲ್ಪಟ್ಟು ಜನಪ್ರಿಯತೆ ಹೆಚ್ಚಿಸಲು ಕಾರಣವಾಯಿತು.
ನಂತರ 2010ರಲ್ಲಿ ಮುಂಬೈ ಕನ್ನಡ ಸಂಘದ ವತಿಯಿಂದ ಮುಂಬೈಯಲ್ಲಿ ಈ ನಿಯಮಗಳ ಪ್ರಕಾರ ಆಟ ಪ್ರದರ್ಶನಗೊಂಡಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ 2017 ರ ನಂತರ ವಿಶ್ವವಿದ್ಯಾನಿಲಯ ಮಟ್ಟದ ಪಂದ್ಯಾಟ ನಡೆದು ಇನ್ನಷ್ಟು ಆಟ ಜನಪ್ರಿಯಗೊಂಡಿದೆ. ಮೂರು ಬಾರಿ ಲಗೋರಿ ಆಟದ ನಿಯಮದ ಪುಸ್ತಕ ಮರು ಮುದ್ರಣಗೊಂಡು 2019ರಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸೀತರಾಮ ಕೇವಲ ರವರು ಇಂಗ್ಲಿಷಿಗೆ ಭಾಷಾಂತರಿಸಿ ಈ ಆಟಕ್ಕೆ ಮತ್ತಷ್ಟು ಮಾನ್ಯತೆ ತರಲು ಕಾರಣವಾಯಿತು. ಶಾಲಾ-ಕಾಲೇಜುಗಳಲ್ಲಿ ಆಟ ಸೇರ್ಪಡೆಗೊಲ್ಲಬೇಕಾದರೆ ಹಾಗೂ ಪ್ರಸ್ತುತ ಲಗೋರಿ ಆಟ ಉಳಿಯಬೇಕಾದರೆ ಮತ್ತು ರಾಜ್ಯಾದ್ಯಂತ ವಿಸ್ತಾರವಾಗ ಬೇಕಾದರೆ ಕರ್ನಾಟಕ ಲಗೋರಿ ಅಸೋಸಿಯೇಷನ್ ಅನಿವಾರ್ಯತೆ ಕಂಡುಕೊಂಡು ರಾಜ್ಯದಲ್ಲಿ ಲಗೋರಿ ಅಸೋಸಿಯೇಷನ್ 2021ರಲ್ಲಿ ಸ್ಥಾಪಿಸಿ ಕಾರ್ಯಕಾರಿ ಸಮಿತಿ ರಚನೆಯಾಗಿದೆ. ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಶ್ರೀ ಕೆ ಸಿ ನಾರಾಯಣ ಗೌಡ ಮಹಾಪೋಷಕರಾಗಿ, ಹಾಗೂ ಕರ್ನಾಟಕ ಸರ್ಕಾರ ಮೀನುಗಾರಿಕೆ ಮತ್ತು ಬಂದರು ಒಳನಾಡು ಖಾತೆ ಸಚಿವರಾದ ಶ್ರೀ ಎಸ್ ಅಂಗಾರ ಗೌರವ ಅಧ್ಯಕ್ಷರಾಗಿದ್ದಾರೆ. ಆಧುನಿಕ ಲಗೋರಿಯ ಜನಕ ಶ್ರೀ ದೊಡ್ಡಣ್ಣಬರೆಮೇಲುರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಡಾ. ಕೃಷ್ಣಯ್ಯ ದೈಹಿಕ ಶಿಕ್ಷಣ ನಿರ್ದೇಶಕರು ಮೈಸೂರು ವಿಶ್ವವಿದ್ಯಾನಿಲಯ, ಶ್ರೀ ಅಕ್ಷಯ್ ಕೆ.ಸಿ. ನಿರ್ದೇಶಕರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ, ಡಾ. ದೇವಿಪ್ರಸಾದ್ ಬೊಲ್ಮ ಧರ್ಮಸ್ಥಳ, ಡಾ.ಕಿಶೋರ್ ಕುಮಾರ್ ದೈಹಿಕ ಶಿಕ್ಷಣ ನಿರ್ದೇಶಕರು ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಎಸ್ ಸಂಶುದ್ದೀನ್, ಡಾ.ರಾಘವನ್ ಬೆಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೆ.ಟಿ. ರವಿ ಕೆ.ಆರ್. ಪೇಟೆ, ಸಂಘಟನಾ ಕಾರ್ಯದರ್ಶಿ ಶ್ರೀ ಎಸ್. ಟಿ. ವೆಂಕಟೇಶ್ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಕೋಶಾಧಿಕಾರಿಯಾಗಿ ಶ್ರೀ ಮಾಧವ ಬಿ. ಕೆ. ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ, ಸಹಕಾರ್ಯದರ್ಶಿಗಳಾಗಿ ಶ್ರೀ ಹರೀಶ್ ರೈ ಉಬರಡ್ಕ, ಶ್ರೀ ಶಿವರಾಮ ಏನೇಕಲ್, ಶ್ರೀ ಬಸವರಾಜ ಶಿವಮೊಗ್ಗ, ಶ್ರೀ ಕಾಂತರಾಜು ದೈಹಿಕ ಶಿಕ್ಷಣ ನಿರ್ದೇಶಕರು ಮೈಸೂರು ವಿಶ್ವವಿದ್ಯಾಲಯ, ನಿರ್ದೇಶಕರುಗಳಾಗಿ ಡಾ. ಎಚ್ ವಿ. ಉದಯಕುಮಾರ್ ಟಿ ನರಸೀಪುರ, ಶ್ರೀ ಚಂದ್ರು ಸಿ ಮೈಸೂರು, ಶ್ರೀ ಮಂಜುನಾಥ ಎ.ಯು.ಸುಳ್ಯ, ಶ್ರೀ ರಾಧಾಕೃಷ್ಣ ಹೊಸಲಿಕೆ ಮೂಡುಬಿದರೆ, ಶ್ರೀ ವೀರನಾಥ್ ಸುಳ್ಯ, ಶ್ರೀ ಬಾಲಕೃಷ್ಣ ಬರೆಮೇಲು ಬೆಂಗಳೂರು, ಶ್ರೀ ಕೌಶಿಕ್ ಚಿಕ್ಕಮಂಗಳೂರು, ಶ್ರೀ ಯನ್ ಕೃಷ್ಣಮೂರ್ತಿ ಮೈಸೂರು, ಶ್ರೀ ಪ್ರಸಾದ್ ಜೆ ಮಂಡ್ಯ, ಶ್ರೀ ಮಂಜಪ್ಪ ಟಿ ಶಿವಮೊಗ್ಗ, ಡಾ. ಎಸ್ ಸದಾಶಿವಯ್ಯ ಪಲ್ಲೇದ ಕೊಡಗು, ಶ್ರೀ ನಾಗೇಶ ಎಚ್ ಡಿ ಕೋಟೆ, ಶ್ರೀ ತ್ಯಾಗಂ ದಕ್ಷಿಣ ಕನ್ನಡ, ಶ್ರೀ ತಿಮ್ಮರೆಡ್ಡಿ ಡಿ.ಎ ರಾಮನಗರ, ಶ್ರೀ ದೇಚಮ್ಮ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು ಮಡಿಕೇರಿ, ಶ್ರೀ ಶ್ರೀಕಂಠಸ್ವಾಮಿ ಬೆಂಗಳೂರು, ಶ್ರೀ ರವೀಂದ್ರನಾಥ ಕೆ ಬಿ ಬೆಂಗಳೂರು, ಶ್ರೀ ಶಿವಕುಮಾರ್ ಬೆಂಗಳೂರು, ಶ್ರೀ ರಾಘವೇಂದ್ರ ಮೈಸೂರು, ಗೌರವ ಸಲಹೆಗಾರರಾಗಿ ಡಾ. ಎಂ ಮೋಹನ್ ಆಳ್ವ ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಮೂಡಬಿದ್ರೆ, ಶ್ರೀ ಸೀತಾರಾಮ ರೈ ಸವಣೂರು ಅಧ್ಯಕ್ಷರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ, ಶ್ರೀ ರಮೇಶ್ ಕ್ರಿಕೆಟ್ ತರಬೇತುದಾರರು ಮೈಸೂರು, ಶ್ರೀ ಸುರೇಶ್ ಯನ್ ಬಿ ವಾಲಿಬಾಲ್ ತರಬೇತುದಾರರು ಮೈಸೂರು, ಕಾನೂನು ಸಲಹೆಗಾರರಾಗಿ ಶ್ರೀ ದಿನೇಶ್ ಮಡಪ್ಪಾಡಿ ಸುಳ್ಯ, ಪತ್ರಿಕಾ ಪ್ರತಿನಿಧಿಯಾಗಿ ಎಚ್. ಟಿ. ಅನಿಲ್ ಕೊಡಗು, ಶ್ರೀ ಪರಮೇಶ್ ಮಂಡ್ಯ, ಶ್ರೀ ಹರೀಶ್ ಬಂಟ್ವಾಳ, ಶ್ರೀ ರಾಜಶೇಖರ ಬೆಂಗಳೂರು ಆಯ್ಕೆಯಾದರು.