Recent Posts

Sunday, January 19, 2025
ರಾಜಕೀಯ

Breaking News : ಸಂಜೀವ ಮಠಂದೂರು ಆಯ್ಕೆ ಬದಲಾವಣೆಗೆ ಶಾ ಸೂಚನೆ ಸಾಧ್ಯತೆ ; ಕ್ಷೇತ್ರದಲ್ಲಿ ಕಾರ್ಯಕರ್ತರ ಆಕ್ರೋಶ ಹಿನ್ನಲೆ ‘ ಕೈಗೆ ಬಂದ ತುತ್ತು ಬಾಯಿಗಿಲ್ಲ ‘ – ಕಹಳೆ ನ್ಯೂಸ್

ಪುತ್ತೂರು : ಸೋಮವಾರ ಅಮಾವಾಸ್ಯೆಯ ದಿನ ಪುತ್ತೂರು ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ದ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.

ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ  ಸಂಜೀವ ಮಠಂದೂರು ಪುತ್ತೂರಿನ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಲೆ ಕಾರ್ಯಕರ್ತರು ಕಂಡಾಮಂಡಲವಾಗಿದ್ದರೆ, ಬಿಜೆಪಿ ಸೋಲು ನಿಶ್ಚಿತ ಎನ್ನುವ ಶ್ಟೇಟಸ್ಸ್ ಗಳನ್ನು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಭಾರಿ ಸಂಜೀವ ಮಠಂದೂರು ಪುತ್ತೂರು ಕ್ಷೇತ್ರದಿಂದ ಸ್ಪರ್ದಿಸಿದ್ದರು ಮತ್ತು ಹಾಲಿ  ಶಾಸಕಿ ಶಕುಂತಲ ಟಿ ಶೆಟ್ಟಿಯವರ ವಿರುದ್ದ 4300 ಮತಗಳ ಅಂತರದಿಂದ ಸೋತಿದ್ದರು. ಇದೀಗ ಎರಡನೇ ಬಾರಿ ಸಂಜೀವ ಮಠ೦ದೂರುರವರು ಶಕುಂತಲಾ ಶೆಟ್ಟಿಯವರನ್ನು ವಿರುದ್ದ ಗೆಲ್ಲುವುದ ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿದೆ.

ಅಮಿತ್ ಷಾ ನಡೆಸಿದ ಸಮೀಕ್ಷೆಯಲ್ಲಿ ಮಠ೦ದೂರು ನಂಬರ್ 1 ಸ್ಥಾನದಲ್ಲಿ ಇಲ್ಲದೇ ಇದ್ದರೂ ಅವರಿಗೆ ಟಿಕೆಟ್ ಸಿಕ್ಕಿದು ಹೇಗೆ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಕೇಳ ತೊಡಗಿದ್ದಾರೆ.

ನಳಿನ್ ಕುಮಾರ್ ಕಟೀಲ್ ಶಡ್ಯಂರಕ್ಕೆ ಪುತ್ತೂರಿನ ಬಿಜೆಪಿ ಕಾರ್ಯಕರ್ತರು ಬಲಿ :

ಹೌದು, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಗೇಮ್ ಪ್ಲಾಸ್ ಸಂಜೀವ ಮಠಂದೂರು ಅವರನ್ನು ಕಟಕ್ಕಿಳಿಸುವುದು ಎನ್ನಲಾಗುತ್ತದೆ. ತಾವು ಹೇಳಿದಂತೆ ಕೇಳಿಕೊಂಡು ಬಿದ್ದಿರು ನಾಯಕನ ಅವಶ್ಯಕತೆ ಅವರಿಗೆ ಈ ಹಿನ್ನಲೆಯಲ್ಲಿ ಮಠಂದೂರು ಅವರಿಗೆ ಟಿಕೆಟ್ ನೀಡಲಾಗಿದೆ.

ಷಾಗೆ ದೂರು ನೀಡಿದ ಸಂಘ ಪರಿವಾರ ; ಮಠಂದೂರು ಬದಲಾವಣೆಗೆ ಆಗ್ರಹ

ಮಠಂದೂರು ಹೆಸರು ಫೈನಲ್ ಆಗುತ್ತಿದ್ದಂತೆ ಕಾರ್ಯಕರ್ತರ ಆಕ್ರೋಶ ಗಮನಿಸಿದ ಸಂಘಪರಿವಾದ ಹಿರಿಯರು ಸಭೆ ಸೇರಿ ಶಾಗೆ ಮಠಂದೂರು ಬದಲಾವಣೆಗೆ ಸೂಚನೆ ನೀಡಿದ್ದಾರೆ. ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿಯ ಮರು ಆಯ್ಕೆ ಮಾಡುವಂತೆ ಬಿಜೆಪಿ ವರಿಷ್ಠರಿಗೆ ಸೂಚನೆಯನ್ನು ಸಂಘ ಪರಿವಾರದ ಅಂತಾರಾಷ್ಟ್ರೀಯ ಮಟ್ಟದ ನಾಯಕರು ನೀಡಿದ್ದಾರೆ ಎಂಬ ಮಾಹಿತಿ ಕಹಳೆ ನ್ಯೂಸ್ ಗೆ ಲಭಿಸಿದೆ. ಹೀಗಾಗಿ ಸಂಜೀವ ಮಠಂದೂರು ಬಿಜೆಪಿ ಸ್ಪರ್ಧೆ ನೂರಕ್ಕೆ ನೂರರಷ್ಟು ಖಚಿತವಲ್ಲ. ಸಂಜೀವ ಮಠಂದೂರು ಬದಲು ಆಶೋಕ್ ಕುಮಾರ್ ರೈ, ಕಿಶೋರ್ ಕುಮಾರ್ ಪುತ್ತೂರು, ಅರುಣ್ ಪುತ್ತಿಲ ಈ ಮೂರವಲ್ಲಿ ಒಬ್ಬರ ಆಯ್ಕೆ ಮಾಡುವ ಸಾಧ್ಯತೆ ಇದೆ.

ಅಮಿತ್ ಶಾರಿಗೆ ಕಾರ್ಯಕರ್ತರಿಂದ ನೇರ ಟ್ವೀಟ್ ಮಠಂದೂರು ಬದಲಾವಣೆಗೆ ಆಗ್ರಹ

ವರದಿ : ಕಹಳೆ ನ್ಯೂಸ್