Recent Posts

Monday, January 20, 2025
ಹೆಚ್ಚಿನ ಸುದ್ದಿ

ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಬಳಿ ಸಿಮೆಂಟ್ ತುಂಬಿದ್ದ ವಾಹನ ಪಲ್ಟಿ ; ಸ್ಥಳದಲ್ಲೇ ಇಬ್ಬರು ಸಾವು-ಕಹಳೆ ನ್ಯೂಸ್

ವಿಜಯಪುರ : ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಬಳಿ ಸಿಮೆಂಟ್ ತುಂಬಿದ್ದ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ದುರ್ದೈವಿಗಳನ್ನು ಗೆದ್ದಲಮರಿ ತಾಂಡಾದ ನಿವಾಸಿ 40 ವರ್ಷದ ವೆಂಕಟೇಶ್ ಪವಾರ ಹಾಗೂ ಢವಳಗಿ ನಿವಾಸಿ 45 ವರ್ಷದ ನಾಗಪ್ಪ ದಂಡೆನ್ನವರ್ ಎಂದು ತಿಳಿದುಬಂದಿದೆ. ಮುದ್ದೇಬಿಹಾಳದಿಂದ ನೇಬಗೇರಿಗೆ ಸಿಮೆಂಟ್ ತುಂಬಿಕೊಂಡು ಹೊಗುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟರೆ ಇನ್ನಿಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು