Sunday, January 19, 2025
ಕಾಸರಗೋಡು

ಕಾಸರಗೋಡು ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಶ್ರೀಜಿತ್ ಎಂಬವರ ಮೇಲೆ ದುಷ್ಕರ್ಮಿಗಳಿಂದ ಕೊಲೆಗೆ ಯತ್ನ-ಕಹಳೆ ನ್ಯೂಸ್

ಕಾಸರಗೋಡು : ದುಷ್ಕರ್ಮಿಗಳ ತಂಡವೊಂದು ಕಾಸರಗೋಡು ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಶ್ರೀಜಿತ್ ಎಂಬವರ ಮೇಲೆ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ಶ್ರೀಜಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ವತ್ರೆಗೆ ದಾಖಲಿಸಲಾಗಿದ್ದು, ಈ ಹತ್ಯೆ ಯತ್ನದ ಹಿಂದೆ ಸಿಪಿಐಎಂ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ದೂರಿದೆ. ಕೇರಳದಲ್ಲಿ ಮಂಗಳವಾರವಷ್ಟೇ ವಿಧಾನಸಭಾ ಚುನಾವಣೆ ನಡೆದಿತ್ತು. ಇದರ ಬೆನ್ನಲ್ಲೇ ಕಣ್ಣೂರಿನಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತನ ಹತ್ಯೆ ನಡೆದಿದ್ದು, ಇದೀಗ ಕಾಸರಗೋಡಿನಲ್ಲಿ ಬಿಜೆಪಿ ಮುಖಂಡನ ಹತ್ಯಾಯತ್ನ ನಡೆದಿದೆ. ಈ ಕುರಿತು ಅಂಬಲತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.