ಸರ್ವೆ ದೇವಸ್ಥಾನಕ್ಕೆ ಧರ್ಮಸ್ಥಳದಿಂದ 10 ಲಕ್ಷ ರೂಪಾಯಿಯ ಅನುದಾನದ ಚೆಕ್ ನ್ನು ಹಸ್ತಾಂತರಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್-ಕಹಳೆ ನ್ಯೂಸ್

ಪುತ್ತೂರು : ಜೀರ್ಣೋದ್ಧಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು 10 ಲಕ್ಷ ರೂ. ಅನುದಾನ ನೀಡಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಗುರುವಾರ ದೇವಳಕ್ಕೆ ಭೇಟಿ ನೀಡಿ ಅನುದಾನದ ಚೆಕ್ ಹಸ್ತಾಂತರಿಸಿದರು. ಬಳಿಕ ಮಾತನಾಡಿ, ಶ್ರೀ ಕ್ಷೇತ್ರದಿಂದ ಮಂಜುನಾಥ ದೇವರ ಪ್ರಸಾದ ರೂಪದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅನುದಾನ ಒದಗಿಸಿದ್ದಾರೆ. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಸಂಪನ್ಮೂಲ ಸಂಗ್ರಹ ಇನ್ನಷ್ಟು ವೇಗ ಪಡೆಯಲಿ. ದೇವರ ಅನುಗ್ರಹದಿಂದ ಮುಂದಿನ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ ಅನುದಾನ ಒದಗಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ ಚಟುವಟಿಕೆಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾದರಿ ದೇವಳವನ್ನಾಗಿ ಮಾಡಬೇಕೆಂದು ಹೇಳಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮಾತನಾಡಿ, ಮೇ 15ರಿಂದ 21ರವರೆಗೆ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ದೇವಳದಲ್ಲಿ ಶ್ರಮದಾನ, ಕಾಮಗಾರಿಗಳ ವೇಗ ಪಡೆಯಲಿವೆ ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಆನಂದ್, ವಲಯ ಮೇಲ್ವಿಚಾರಕಿ ರೋಹಿಣಿ, ಒಕ್ಕೂಟದ ಅಧ್ಯಕ್ಷರುಗಳಾದ ಅಶೋಕ ಎಸ್.ಡಿ., ರಾಧಾಕೃಷ್ಣ ರೈ ರೆಂಜಲಾಡಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಆರ್ಥಿಕ ಸಮಿತಿ ಸಂಚಾಲಕರಾದ ಜಿಕೆ ಪ್ರಸನ್ನ ಕಲ್ಲಗುಡ್ಡೆ, ಅರ್ಚಕ ಶ್ರೀರಾಮ ಕಲ್ಲೂರಾಯ, ಕೃಷಿ ಪಂಡಿತ ಪುರಸ್ಕøತ ಮೋನಪ್ಪ ಕರ್ಕೆರಾ ಕಂಪ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಎನ್‍ಎಸ್‍ಡಿ ಸರ್ವೆ ದೋಳ ಗುತ್ತು, ವಿಶ್ವನಾಥ ರೈ ಮೇಗಿನಗುತ್ತು ಮುಂಬೈ, ಬೆಳಿಯಪ್ಪ ಗೌಡ ಸರ್ವೆ, ಕುಕ್ಕ ಕಾಡ ಬಾಗಿಲು, ಪ್ರವೀಣ ರೈ ಮೇಗಿನಗುತ್ತು, ಜಯಂತಿ ನೆಕ್ಕಿತಡ್ಕ, ಸ್ಥಳ ದಾನಿ ಪದ್ಮಾವತಿ ರೈ ಸರ್ವೆ, ಗ್ರಾಪಂ ಸದಸ್ಯೆ ರಸಿಕ ರೈ ಮೇಗಿನಗುತ್ತು, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಸೇವಾ ಪ್ರತಿನಿಧಿಗಳಾದ ಲತಾ, ಚಿತ್ರಾ, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಆನಂದ ಪೂಜಾರಿ ಸರ್ವೆದೋಳ ಗುತ್ತು, ಆನಂದ ಬಂಡಾರಿ ಸೊರಕೆ, ವಿನಯ ಕುಮಾರ್ ರೈ ಸರ್ವೆ, ವಸಂತ ರೈ ಸೊರಕೆ, ಅಶೋಕ ನಾಯ್ಕ ಸೊರಕೆ, ಲೋಕೇಶ್ ಗೌಡ ತಂಬುತಡ್ಕ, ಶಶಿಧರ ಎಸ್‍ಡಿ ಸರ್ವೆ ದೋಳ ಗುತ್ತು, ಶಂಕರ ನಾರಾಯಣ ಭಟ್ ಸರ್ವೆ, ವಿಜಯಲಕ್ಷ್ಮೀ ಭಟ್ ಸರ್ವೆ, ಉಮೇಶ್ ಎಸ್‍ಡಿ ಸರ್ವೆ ದೋಳ ಗುತ್ತು, ಕಮಲಾ ತಂಬುತ್ತಡ್ಕ, ಅಂಜಲಿ ಭಂಡಾರಿ ಸೊರಕೆ ಭಾಗವಹಿಸಿದ್ದರು.