ಬಂಟ್ವಾಳ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಗ್ರಾಮ ದೈವ ಶ್ರೀ ಗಿಲ್ಕಿಂಜತಾಯಿ ದೇವರ ಜಾತ್ರಾ ಮಹೋತ್ಸವ ಎಪ್ರಿಲ್ 8 ರಂದು ಸರಕಾರದ ಆದೇಶದ ಅನುಸಾರ ಕೋವಿಡ್ ನೀತಿ ನಿಯಮಗಳನ್ನು ಪಾಲಿಸಿ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿವರ್ಷವೂ ಜಾತ್ರಾ ಸಂದರ್ಭದಲ್ಲಿ ಅನ್ನದಾನದ ವ್ಯವಸ್ಥೆಯನ್ನು ಮಾಡುತ್ತಿರುವ ಯುವಶಕ್ತಿ ಫ್ರೆಂಡ್ಸ್ ಸಂಘವು ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೈವಕ್ಕೆ ಬಂಗಾರದ ಹೂ ಕಾಣಿಕೆಯನ್ನು ಸಮರ್ಪಿಸಲಾಯಿತು.
ಈ ಜಾತ್ರಾ ಮಹೋತ್ಸವಕ್ಕೆ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಭೂಲ್ಯ ಗಂಧವನ್ನು ಪಡೆದುಕೊಂಡರು.