Recent Posts

Sunday, January 19, 2025
ರಾಜಕೀಯ

ತೆನೆ ಹೊತ್ತ ಮಹಿಳೆಗೆ ಜೈ ಎಂದ ನಟಿ ಅಮೂಲ್ಯ ಜಗದೀಶ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಸಿಗಲಿಲ್ಲ ಎಂದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈಗ ಚಿತ್ರ ನಟಿ ಅಮೂಲ್ಯರವರ ಮಾವ ಮಾಜಿ ಕಾರ್ಪೋರೇಟರ್ ರಾಮಚಂದ್ರ ಬೆಂಗಳೂರಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಅವರು ಈಗ  ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೆಡಿಎಸ್ ಕಚೇರಿಯಲ್ಲಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಕೂಡಾ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅಮೂಲ್ಯ, ನಾನು ನನ್ನ ಪತಿ ಮತ್ತು ಮಾವ ಅವರ ಜೊತೆ ಪಕ್ಷ ಸೇರ್ಪಡೆ ಆಗಿದ್ದೀನಿ. ಮುಂದಿನ ದಿನಗಳಲ್ಲಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಅಮೂಲ್ಯ ತಿಳಿಸಿದ್ದಾರೆ.

ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ಆರ್ ಆರ್ ನಗರಕ್ಕೆ ಟಿಕೆಟ್ ಕೊಡೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಟಿಕೆಟ್ ನೀಡಿದರೆ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ರಾಮಚಂದ್ರ ಅವರು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಲ್ಲಿ ಟಿಕೆಟ್ ಸಿಕ್ಕದ ಹಿನ್ನೆಲೆಯಲ್ಲಿ ಚಿಕ್ಕಪೇಟೆಯ ಹೇಮಚಂದ್ರಸಾಗರ್ ಮತ್ತು ಸಿ.ವಿ ರಾಮನ್ ನಗರದ ರಮೇಶ್ ಜೆಡಿಎಸ್ ಸೇರ್ಪಡೆಯಾದರು.

ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ದಿನೇ ದಿನೇ ಪಕ್ಷದ ಶಕ್ತಿಯನ್ನು ಕಾರ್ಯಕರ್ತರು ಹೆಚ್ಚಿಸಿದ್ದಾರೆ. ಸಾಕಷ್ಟು ಜನ ಪಕ್ಷಕ್ಕೆ ಬಂದು ಸೇರುತ್ತಾ ಇದ್ದಾರೆ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡೇ ಮಾಡುತ್ತಾರೆ. ನಾಳೆಯೂ ಸಾಕಷ್ಟು ಜನ ಜೆಡಿಎಸ್ ಸೇರ್ಪಡೆಯಾಗುತ್ತಾರೆ. ರಾಯಚೂರು ಹುಬ್ಬಳ್ಳಿ ಬಂಡಾಯ ಎದ್ದವರು ಬರುತ್ತಾರೆ. ಬೆಂಗಳೂರು ಒಂದರಲ್ಲೇ 8 ರಿಂದ 10 ಸೀಟು ಗೆಲ್ಲುತ್ತೇವೆ. ಇವತ್ತಿನ ಬೆಳವಣಿಗೆ ನೋಡಿದರೆ ಜೆಡಿಎಸ್ ಗೆ ಒಳ್ಳೆಯ ಕಾಲ ಬಂದಿದೆ ಎಂದು ತಿಳಿಸಿದರು.

ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಕುರುಬರ ಸಂಘ ಪ್ರತಿಭಟನೆ ವಿಚಾರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ, ನಾನು ಕುರುಬ ಸಮುದಾಯವನ್ನು ಬೈಯೋದಿಲ್ಲ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಫ್ಲೆಕ್ಸ್ ಗಳಿಗೆ ಚಪ್ಪಲಿಯಲ್ಲಿ ಹೊಡೆಸಿದ್ದಾರೆ. ಚಪ್ಪಲಿಯಿಂದ ನಮ್ಮ ಫ್ಲೆಕ್ಸ್ ಗಳಿಗೆ ಚಪ್ಪಲಿಯಿಂದ ಹೊಡೆಸಿದ್ದರೂ ನನಗೆ ಬೇಜಾರಿಲ್ಲ. ಒಳ್ಳೆಯದಾಗಲಿ ಎಂದರು.