Recent Posts

Monday, April 7, 2025
ಕಾಸರಗೋಡು

ಸಮುದ್ರದಲ್ಲಿ ಸ್ನಾನಕ್ಕಿಳಿದ ಬಾಲಕ ಮುಳುಗಿ ಮೃತ್ಯು-ಕಹಳೆ ನ್ಯೂಸ್

ಕಾಸರಗೋಡು : ಕಾಞಂಗಾಡ್ ಬಲ್ಲ ಕಡಪ್ಪುರದಲ್ಲಿ ಏಪ್ರಿಲ್ 8 ರಂದು ಸಹಪಾಠಿಗಳ ಜೊತೆ ಸಮುದ್ರದಲ್ಲಿ ಸ್ನಾನಕ್ಕಿಳಿದ ಬಾಲಕ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟ ಬಾಲಕನನ್ನು ವಡಗರ ಮುಕ್ ನ ಝಕರಿಯಾ ರವರ ಪುತ್ರ 14 ವರ್ಷದ ಅಜ್ಮಲ್ ಎಂದು ಗುರುತಿಸಲಾಗಿದೆ. ಈತ ಹೊಸದುರ್ಗ ಹಯರ್ ಸೆಕಂಡರಿ ಶಾಲಾ 9ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಅಜ್ಮಲ್ ಗುರುವಾರ ಸಂಜೆ ತನ್ನ ಆರು ಮಂದಿ ಸಹಪಾಠಿಗಳ ಜೊತೆ ಸ್ನಾನಕ್ಕಿದಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಅಜ್ಮಲ್ ನೀರುಪಾಲಾಗಿದ್ದನು. ಸಮುದ್ರ ಪಾಲಾಗಿದ್ದ ಅಜ್ಮಲ್ ಗಾಗಿ ಗುರುವಾರ ಸಂಜೆಯಿಂದ ಶೋಧ ನಡೆಸಿದ್ದು, ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ