Sunday, January 19, 2025
ಮಡಿಕೇರಿ

ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕಿಳಿದ ಮೊಮ್ಮಗ ಮುಳುಗಿ ಮೃತ್ಯು ; ಮೊಮ್ಮಗನ ಮೃತದೇಹ ಕಂಡು ಅಜ್ಜಿ ಹೃದಯಾಘಾತದಿಂದ ಸಾವು-ಕಹಳೆ ನ್ಯೂಸ್

ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕಿಳಿದು ಮೃತಪಟ್ಟ ಮೊಮ್ಮಗನ ಮೃತದೇಹ ಕಂಡು ಅಜ್ಜಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಮ್ಲಾನ್ ಎಂಬವವರ ಪುತ್ರ 18 ವರ್ಷದ ಮುಬಾಶೀರ್ ಗುರುವಾರ ಬೆಳಗ್ಗೆ ಸ್ನಾನ ಮಾಡಲೆಂದು ಹಾರಂಗಿ ಹಿನ್ನೀರಿಗೆ ಇಳಿದಿದ್ದು, ಬಳಿಕ ಕಾಣೆಯಾಗಿದ್ದ. ಆತನ ಮೃತದೇಹ ಶುಕ್ರವಾರ ಬೆಳಗ್ಗೆ ಹಾರಂಗಿ ಹಿನ್ನೀರಿನಲ್ಲಿ ದೊರೆತಿದೆ. ಈ ವೇಳೆ ಮೊಮ್ಮಗನ ಮೃತದೇಹ ಕಂಡು ಆತನ ಅಜ್ಜಿ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು