Sunday, January 19, 2025
ಸಿನಿಮಾ

ಸ್ಯಾಂಡಲ್‌ವುಡ್‌ ನಟನಿಗೆ ಕಿಸ್ ಮಾಡಲು ಕಾಯುತ್ತಿದ್ದಾರಂತೆ ನಟಿ ರಾಗಿಣಿ!

ಬೆಂಗಳೂರು: ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ರಾಗಿಣಿ ಸ್ಯಾಂಡಲ್‌ವುಡ್‌ ನಟನಿಗೆ ಕಿಸ್ ಮಾಡಬೇಕೆಂದು ಹೇಳಿದ್ದಾರೆ.

ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ನಟಿ ರಾಗಿಣಿ ಹಾಗೂ ರಕ್ಷಿತಾ ಪ್ರೇಮ್ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ನಿರೂಪಕರಾಗಿರುವ ಶಿವರಾಜ್ ಕುಮಾರ್ ಸತ್ಯ ಅಥವಾ ಧೈರ್ಯ(ಟ್ರೂತ್ ಆರ್ ಡೇರ್) ಸೆಗ್ಮಂಟ್‍ನನ್ನು ಶುರು ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸತ್ಯ ಅಥವಾ ಧೈರ್ಯದಲ್ಲಿ ಸತ್ಯವನ್ನು ಆಯ್ಕೆ ಮಾಡಿಕೊಂಡ ರಾಗಿಣಿ ಅವರಿಗೆ ಶಿವರಾಜ್ ಕುಮಾರ್ ನೀವು ಯಾವ ಕನ್ನಡದ ನಟನಿಗೆ ಕಿಸ್ ಮಾಡಲು ಕಾಯುತ್ತಿದ್ದೀರ ಎಂದು ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ರಾಗಿಣಿ ಎಲ್ಲರ ಜೊತೆ ಕಿಸ್ ಮಾಡುವ ಆಸೆ ಇದೆ ನನಗೆ ಎಂದು ಉತ್ತರಿಸಿದ್ದಾರೆ. ಆದರೆ ಯಾವುದಾದ್ದರೂ ಒಬ್ಬ ನಟನ ಹೆಸರು ಹೇಳಿ ಎಂದು ಕೇಳಿದ್ದಾಗ ಸುದೀಪ್ ಅವರೊಂದಿಗೆ ಆನ್‍ಸ್ಕ್ರೀನ್ ಕಿಸ್ ಮಾಡಬೇಕೆಂಬ ಆಸೆಯನ್ನು ರಾಗಿಣಿ ಹೇಳಿಕೊಂಡಿದ್ದಾರೆ.

ರಾಗಿಣಿ ಸುದೀಪ್ ಅವರ ಜೊತೆ ವೀರ ಮದಕರಿ ಹಾಗೂ ಕೆಂಪೇಗೌಡ ಚಿತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ನನಗೆ ರೋಲ್ ಮಾಡಲ್ ಎಂದು ಕಾರ್ಯಕ್ರಮದಲ್ಲೇ ತಿಳಿಸಿದ್ದಾರೆ.