Sunday, November 24, 2024
ಪುತ್ತೂರು

ಪುತ್ತೂರಿನ ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯೋತ್ಸವಕ್ಕೆ ಚಾಲನೆ-ಕಹಳೆ ನ್ಯೂಸ್

ಪುತ್ತೂರು : ಎಪ್ರಿಲ್ 9ರಿಂದ ಪ್ರಾರಂಭಗೊಂಡು ಮೇ.9 ರ ತನಕ ನಡೆಯಲಿರುವ ಪುತ್ತೂರಿನ ಸುಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಕೋರ್ಟ್ ರಸ್ತೆಯ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಸಂಭ್ರಮ ‘ಮುಳಿಯೋತ್ಸವ’ಕ್ಕೆ ಎಪ್ರಿಲ್ 9ರಂದು ಚಾಲನೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಳಿಯೋತ್ಸವವನ್ನು ದೀಪಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದ ತುಳುಚಿತ್ರ ನಟಿ ನವ್ಯ ಪೂಜಾರಿ ಅವರು ಮಾತನಾಡಿ, ತನ್ನ ವಿಶಿಷ್ಟ ಗುಣಮಟ್ಟದಲ್ಲಿ ಸೇವೆ ನೀಡುವ ಮೂಲಕ ಸುಧೀರ್ಘ 75 ವರ್ಷಗಳ ಕಾಲ ಗ್ರಾಹಕರ ಸೇವೆ ನೀಡುವಲ್ಲಿ ಸಹಕಾರಿಯಾಗಿದ್ದು, ಮುಳಿಯ ಜ್ಯುವೆಲ್ಸ್ ನಲ್ಲಿ ಆಭರಣಗಳ ಆಯ್ಕೆ ವಿಶೇಷ ಅವಕಾಶಗಳಿವೆ. ತನ್ನ ಗ್ರಾಹಕರಿಗಾಗಿ ಚಿನ್ನಾಭರಣಗಳ ಸಂಪ್ರದಾಯವನ್ನು ಮೀಸಲಿಟ್ಟುಕೊಂಡಿರುತ್ತದೆ. ಇಲ್ಲಿನ ಆಭರಣಗಳು ಅತ್ಯಾಕರ್ಷಣೆಯ ಜೊತೆಗೆ ಲೈಟ್ ವೈಟ್ ಆಭರಣವು ದೇಹದಲ್ಲಿ ಆಭರಣಗಳನ್ನು ಧರಿಸಿಕೊಂಡ ಅನುಭವವೇ ಉಂಟುಮಾಡುವುದಿಲ್ಲ ಎಂದು ಹೇಳಿದ ಅವರು ಮುಂದುವರಿಯುತ್ತಾ ಬಂದಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಹಾಗೂ ಮುಖ್ಯ ಅತಿಥಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಮಾತನಾಡಿ, ಚಿನ್ನಾಭರಣಗಳ ವ್ಯವಹಾರದಲ್ಲಿ ಕಳೆದ 75 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಾ ಬಂದಿರುವ ಮುಳಿಯ ಜ್ಯುವೆಲ್ಸ್ ಕರಾವಳಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಬ್ರಾಂಡ್ ಆಗಿ ಮೂಡಿ ಬಂದಿದೆ. ಗ್ರಾಹಕರಿಗೆ ಪಾರದರ್ಶಕ ಮತ್ತು ಗುಣಮಟ್ಟದ ಸೇವೆ ನೀಡುತ್ತಾ ಬಂದಿದ್ದು ಸಂಸ್ಥೆಯು ಸದೃಢವಾಗಿ ಬೆಳೆಯುವಲ್ಲಿ ಸಹಕಾರಿಯಾಗಿದೆ ಎಂದರು. ಇನ್ನೂ ಮುಳಿಯ ಜ್ಯುವೆಲ್ಸ್ ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಚಿನ್ನಾಭರಣ ಖರೀದಿಗೆ ಸೂಕ್ತ ಸಮಯವೆಂಬುದಿಲ್ಲ. ದರ ಏರಿಳಿಕೆಯಾಗುತ್ತಲೇ ಇರುತ್ತದೆ.

ಚಿನ್ನಾಭರಣ ಖರೀದಿಯು ಇತರ ಸಾಮಾಗ್ರಿಗಳ ಖರೀದಿಗಳಂತಲ್ಲ. ಖರೀದಿಸಿ ಎಷ್ಟೇ ವರ್ಷ ಕಳೆದರೂ ತನ್ನ ಬೆಲೆ ದುಪ್ಪಟ್ಟು ಆಗುವುದೇ ಹೊರತು ಬೆಲೆ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ ಅವರು ಪ್ರತಿ ವರ್ಷ ಸಂಸ್ಥೆಯಲ್ಲಿ ಮುಳಿಯ ಚಿನ್ನೊತ್ಸವನ್ನು ಆಚರಿಸಲಾಗುತ್ತಿದ್ದು ಈ ವರ್ಷ ಆಭರಣಗಳ ವಿಶೇಷ ಸಂಗ್ರಹದೊಂದಿಗೆ ಮುಳಿಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದ ವೇಣು ಶರ್ಮರವರು, ಚಿನ್ನಾಭರಣಗಳ ಕ್ಷೇತ್ರದಲ್ಲಿ 75 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್ ಒಟ್ಟು 5 ಶಾಖೆಗಳನ್ನು ಹೊಂದಿದ್ದು, ಪ್ರತಿ 10-15 ದಿನಗಳ ಕಾಲ ನಡೆಯುತ್ತಿದ್ದ ಮುಳಿಯ ಚಿನ್ನೋತ್ಸವವು ಈ ವರ್ಷ ವಿಶೇಷ ವೆರಾಯಿಟಿ, ವಿನ್ಯಾಸ, ಸಂಗ್ರಹಗಳೊಂದಿಗೆ ಮುಳಿಯೋತ್ಸವವನ್ನು ಆಂಟಿಕ್ ಶೋ., ಅಮೂಲ್ಯ ಫೆಸ್ಟ್, ಕರಿಮಣಿ ಮೇಳ, ಸಿಲ್ವರಿಯಾ ಗ್ರಾಂಡ್ ಸೇಲ್ ಎಂಬ ಪ್ರತ್ಯೇಕ ನಾಲ್ಕು ವಿಭಾಗಳಲ್ಲಿ ನಡೆಸಲಾಗುತ್ತಿದೆ. ಕರಿಮಣಿ ಮೇಳದಲ್ಲಿ ವಿಶೇಷವಾಗಿ ಸುಮಾರು 150ಕ್ಕೂ ಅಧಿಕ ವಿನ್ಯಾಸದ ಕರಿಮಣಿ ಹೊಂದಿರುವ ಏಕೈಕ ಸಂಸ್ಥೆಯಾಗಿದೆ ಎಂದರು. ಹಾಗೆಯೇ ಸುಲೋಚನ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನಿ ಕೃಷ್ಣ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮಾನಸ ಶ್ರೀ ಶ್ರೀಕೃಷ್ಣ ಪ್ರಾರ್ಥಿಸಿದರು. ಸಂಸ್ಥೆಯ ಪ್ರಬಂಧಕ ನಾಮದೇವ ಮಲ್ಯ ಸ್ವಾಗತಿಸಿದ್ದು, ಸಿಬಂದಿಗಳಾದ ಸ್ವಾತಿ, ಪುಷ್ಪರಾಜ್, ಮುರಳಿ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಂಜೀವ ವಂದಿಸಿದರು. ಈ ವರ್ಷದ ಮುಳಿಯೋತ್ಸವದಲ್ಲಿ ಮುಳಿಯ ಮನೆತನದ 100 ವರ್ಷ ಇತಿಹಾಸ ಹೊಂದಿರುವ ವಿವಿಧ ವಿನ್ಯಾಸದ ಚಿನ್ನಾಭರಣಗಳ ಪ್ರದರ್ಶನವಿದೆ ಎಂದು ವೇಣು ಶರ್ಮ ತಿಳಿಸಿದರು.