Sunday, November 24, 2024
ಪುತ್ತೂರು

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಮುಷ್ಕರದ ನಡುವೆಯೂ ಎಪ್ರಿಲ್ 10ರಂದು ಪುತ್ತೂರು ವಿಭಾಗದಿಂದ ರಸ್ತೆಗಿಳಿದ 46 ಬಸ್‍ಗಳು-ಕಹಳೆ ನ್ಯೂಸ್

ಪುತ್ತೂರು : ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಂದ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, 2ನೇ ಹಾಗೂ 3ನೇ ದಿನ ಹಲವು ಚಾಲಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಪ್ರಿಲ್ 10ರಂದು 46 ಬಸ್‍ಗಳು ಓಡಾಟ ನಡೆಸಿದ್ದು, ಈ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಓಡಾಟ ಹೆಚ್ಚಾಗಿದೆ. ಪುತ್ತೂರು ವಿಭಾಗಕ್ಕೆ ಸಂಬಂಧಿಸಿ 46 ಬಸ್‍ಗಳನ್ನು ರಸ್ತೆಗೆ ಇಳಿದಿದ್ದು, ಪುತ್ತೂರು ಡಿಪೊದಿಂದ 21 ಬಸ್, ಧರ್ಮಸ್ಥಳ ಘಟಕದಿಂದ 14 ಬಸ್, ಬಿಸಿರೋಡ್ ಘಟಕದಿಂದ 5 ಬಸ್, ಮಡಿಕೇರಿಯಿಂದ 2 ಬಸ್, ಸುಳ್ಯದಿಂದ 5 ಬಸ್ ಓಡಾಟ ನಡೆಸಿದೆ. ಪುತ್ತೂರು ಮಂಗಳೂರು, ಪುತ್ತೂರು ಸುಳ್ಯ, ಬೆಳ್ಳಾರೆ, ಪುತ್ತೂರು ಉಪ್ಪಿನಂಗಡಿ, ಪುತ್ತೂರು ಧರ್ಮಸ್ಥಳ, ಉಜಿರೆ ಕಡೆಗಳಿಗೆ ಬಸ್‍ಗಳ ಓಡಾಟ ನಡೆಸಿದ್ದು, ಬಸ್ ನಿಲ್ದಾಣದಲ್ಲಿನ ಜನಸಂಖ್ಯೆ ಆಧಾರಕ್ಕೆ ಸಂಬಂಧಿಸಿ ಆಯಾ ರೂಟ್ ಗಳಿಗೆ ಬಸ್‍ಗಳನ್ನು ಕಳುಹಿಸಲಾಗುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು