Tuesday, January 21, 2025
ಹೆಚ್ಚಿನ ಸುದ್ದಿ

ನವಭಾರತ್ ಗೆಳೆಯರ ಬಳಗದ 7ನೇ ವಾರ್ಷಿಕ ಮಹಾಸಭೆ ; 2021-2022ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ-ಕಹಳೆ ನ್ಯೂಸ್‍

ಕಲ್ಲಾಜೆ : ನವಭಾರತ್ ಗೆಳೆಯರ ಬಳಗ(ರಿ) ಕಲ್ಲಾಜೆ-ಇಂದಬೆಟ್ಟು ಇದರ 7ನೇ ವಾರ್ಷಿಕ ಮಹಾಸಭೆ ಇಂದು ಕಲ್ಲಾಜೆ ಶಾಲಾ ವಠಾರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯ ಅಧ್ಯಕ್ಷತೆಯನ್ನು ನವಭಾರತ್ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ್ ಕುವೆತ್ಯಾರು ವಹಿಸಿದ್ದರು. ಈ ಸಂದರ್ಭದಲ್ಲಿ 2021-2022ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾದ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಅಧ್ಯಕ್ಷರು ಶ್ರೀಕಾಂತ್ ಇಂದಬೆಟ್ಟು, ಕಾರ್ಯದರ್ಶಿ ನವೀನ್ ಕುಮಾರ್ ನಡುಗುಡ್ಡೆ , ಉಪಾಧ್ಯಕ್ಷರಾಗಿ ಸಂದೀಪ್ ಅಲಕ್ಕೆ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಕೆಳಗಿನ ಕಲ್ಲಾಜೆ, ಕೋಶಾಧಿಕಾರಿಯಾಗಿ ವಿನೋದ್ ಪ್ರಸಾದ್ ಕಲ್ಲಾಜೆ, ಧಾರ್ಮಿಕ ವಿಭಾಗ ಅಶ್ವಥ್ ರಾಜ್ ಕಲ್ಲಾಜೆ, ಆರೋಗ್ಯ ವಿಭಾಗ ಅಮೃತ್ ಎ.ವಿ , ಸಾಂಸ್ಕøತಿಕ ಮತ್ತು ಶೈಕ್ಷಣಿಕ ವಿಭಾಗ ಯುಕೇಶ್ ಮುದೆಲ್ಕಾಡಿ, ಕ್ರೀಡಾ ವಿಭಾಗ ರಾಜೇಶ್ ಹೆಬ್ಬಾರಪಲ್ಕೆ, ಮಾದ್ಯಮ ಮತ್ತು. ಪ್ರಚಾರ ವಿಭಾಗ ರಮೇಶ್ ನೂಜಿಲೆ ಆಯ್ಕೆಯಾದರು