ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಗದ್ಧೆಯಲ್ಲಿ ಸಂತೆ ವ್ಯಾಪಾರದ ಬದಲು ಟ್ರೇಡ್ ಫೇರ್; ನಾಳೆ ದೇವಸ್ಥಾನದ ಸಭಾಭವನದಲ್ಲಿ ಏಲಂ-ಕಹಳೆ ನ್ಯೂಸ್
ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆಗೆ ಸಂಬಂಧಿಸಿ ಜಾತ್ರಾ ಗದ್ಧೆಯಲ್ಲಿ ನಡೆಯಬೇಕಾಗಿದ್ದ ಸಂತೆ ವ್ಯಾಪಾರವನ್ನು ಕೋವಿಡ್ ಮುಂಜಾಗ್ರತಾ ಕ್ರಮದ ಕಾರಣ ರದ್ದುಗೊಳಿಸಲಾಗಿದೆ.
ಹಾಗೂ ಜಾತ್ರೋತ್ಸವದ ಪ್ರಯುಕ್ತ ಸ್ಟಾಲ್ (ಅಂಗಡಿ) ಗಳನ್ನು ಇಡುವುದಕ್ಕಾಗಿ, ಗದ್ದೆ ಏಲಂ ಗೆ ಸರಕಾರದ ತಡೆಯಿರುವುದರಿಂದ ಅನಿವಾರ್ಯವಾಗಿ, ಜಾತ್ರೆ ಪ್ರಯುಕ್ತ ಸುಸಜ್ಜಿತ ಟ್ರೇಡ್ ಫೇರ್-ಮಹಾಲಿಂಗೇಶ್ವರ ಸಭಾಭವನದ ಮೇಲಂತಸ್ತಿನಲ್ಲಿ ನಡೆಸಲು ವ್ಯವಸ್ಥೆ ಮಾಡಿದೆ.
ಇದರ ಏಲಂ ಪ್ರಕ್ರಿಯೆ ಏಪ್ರಿಲ್ 12 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಇಲ್ಲಿ ಸುಮಾರು 40 ಸ್ಟಾಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮತ್ತು ಇಲ್ಲಿ ಬೆಂಕಿಯಿಂದ ಉತ್ಪಾದಿಸುವ ಸಾಮಾಗ್ರಿಯನ್ನು ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳಿಗೆ ಅವಕಾಶ ನೀಡಲಾಗುವುದು.
ಹಾಗಾಗಿ ಸಂತೆ ವ್ಯಾಪಾರದ ಆಸಕ್ತರು ದೇವಳದ ಸಭಾಭವನದಲ್ಲಿ ಹಾಜರಾಗುವಂತೆ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ತಿಳಿಸಿದ್ದಾರೆ.