ಬಾಗೇಪಲ್ಲಿ : ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುನ್ನು ಕಲ್ಪಿಸಿದಾಗ ಮಾತ್ರ ಸಮಸಮಾಜವಾಗಿ ದೇಶ ಉದ್ಧಾರವಾಗಲಿದೆ, ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸ ಬೇಕು, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ನಾಗೇಪಲ್ಲಿ ಟೋಲ್ ಬಳಿ ಮಯೂರಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ನೂತನ ಗಾಮೆರ್ಂಟ್ಸ್ ಶಾಖೆ ಶನಿವಾರ ಉದ್ಘಾಟಿಸಿ ಮಾತನಾಡಿ, ಯಾವುದೇ ಪಕ್ಷಿ ರೆಕ್ಕೆ ಇಲ್ಲದಿದ್ದರೆ ಹಾರಲು ಸಾಧ್ಯವಿಲ್ಲ, ಅದೇ ರೀತಿ ಮಹಿಳೆಯರನ್ನು ಮನೆಗೇ ಸೀಮಿತಗೊಳಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಒಬ್ಬ ಮಹಿಳೆ ಅಕ್ಷರ ಕಲಿತರೆ ಒಂದೆ ಶಾಲೆ ತೆರೆದಷ್ಟು ಸಮಾನವಾಗುತ್ತದೆ ಎಂದರು.
ಬಹುತೇಕ ಉದ್ಯಮಿಗಳು ನಗರ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು ಸಹಜ, ಆದರೆ ಈ ಭಾಗದ ಉದ್ಯಮಿ ವೆಂಕಟ ಶಿವಾರೆಡ್ಡಿ ಬಾಗೇಪಲ್ಲಿಯಂತಹ ಗಡಿ ಭಾಗದಲ್ಲಿ ಗಾಮೆರ್ಂಟ್ಸ್ ತೆರೆದು 2 ಸಾವಿರ ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಸಿ, ಗೌರವದ ಬದುಕುನ್ನು ಕಟ್ಟಿಕೊಟ್ಟಿರುವುದು ಶ್ಲಾಘನೀಯ ಎಂಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅದ್ಯಕ್ಷ ಚಿಕ್ಕ ನರಸಿಂಹಯ್ಯ, ಮಾಜಿ ಅದ್ಯಕ್ಷ ಪಿ.ಎಸ್.ಕೇಶವರೆಡ್ಡಿ, ಮಾವು ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಕೆ.ವಿ.ನಾಗರಾಜು, ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ, ಬಾಗೇಪಲ್ಲಿ ತಾಲೂಕು ಮಂಡಲಾದ್ಯಕ್ಷ ಆರ್. ಪ್ರತಾಪ್ ಎಸ್ಟಿ ಮೊರ್ಚಾ ವೆಂಕಟೇಶ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.