Recent Posts

Sunday, January 19, 2025
ರಾಜಕೀಯ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ ! – ಕಹಳೆ ನ್ಯೂಸ್

ಹಾವೇರಿ: ವಿರೋಧಿಗಳಬ ಬಗ್ಗೆ ಮಾತಾಡಿ ಅವರ ಕಣ್ಣಿಗೆ ತುತ್ತಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ನನನ್ನ ಕೊಲೆಯ ಯತ್ನ ಅಂತಾ ಸಚಿವರು ಆರೋಪಿಸಿದ್ದಾರೆ.

ಶಿರಸಿಯಿಂದ ಬೆಂಗಳೂರಿಗೆ ಅನಂತಕುಮಾರ್ ಹೆಗಡೆ ಕಾರ್ ನಲ್ಲಿ ಬರುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಹಲಗೇರಿ ಬಳಿ ಲಾರಿಯೊಂದು ಏಕಾಏಕಿ ಡಿಕ್ಕಿ ಹೊಡೆಯಲು ನೋಡಿದೆ. ಆದ್ರೆ ಸಚಿವರ ಕಾರು 140 ಕಿ.ಮೀ. ಸ್ಪೀಡ್‍ನಲ್ಲಿದ್ದು, ಕೂದಲೆಳೆ ಅಂತರದಲ್ಲಿ ಪಾಸ್ ಆದ ಕಾರಣ ಹಿಂದೆ ಬರ್ತಿದ್ದ ಬೆಂಗಾವಲು ಕಾರ್‍ಗೆ ಲಾರಿ ಡಿಕ್ಕಿ ಹೊಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಾವಲು ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದ್ರಲ್ಲಿದ್ದ ಎಎಸ್‍ಐ ಪ್ರಭು ತಳವಾರ ಕಾಲಿಗೆ ಗಾಯವಾಗಿದೆ. ಕೂಡಲೇ ಬೆಂಗಾವಲು ಸಿಬ್ಬಂದಿ, ಪರಾರಿ ಆಗ್ತಿದ್ದ ಲಾರಿ ಚಾಲಕನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಾರಿ ಚಾಲಕನನ್ನ ನಾಸೀರ್ ಎಂದು ಗುರುತಿಸಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಟ್ವಿಟ್ಟರ್‍ನಲ್ಲಿ ಆರೋಪಿಸಿರುವ ಪ್ರಕಾರ, ಇದು ಹತ್ಯಾ ಯತ್ನ. ತಮ್ಮ ಬರುವಿಕೆಗಾಗಿಯೇ ರಾಂಗ್ ಸೈಡ್‍ನಲ್ಲಿ ಲಾರಿಯನ್ನು ನಿಲ್ಲಿಸಿಕೊಳ್ಳಲಾಗಿತ್ತು. ತಾವಿದ್ದ ಕಾರುಗಳು ಬರುತ್ತಿದ್ದಂತೆ ಲಾರಿ ಚಾಲಕ ಉದ್ದೇಶವಪೂರ್ವಕವಾಗಿ ತಮ್ಮ ಮೇಲೆ ಹರಿಸಲು ನೋಡಿದ. ಆದ್ರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದೇನೆ. ಈ ಬಗ್ಗೆ ಪೊಲೀಸರು ಸೂಕ್ತ ರೀತಿಯಲ್ಲಿ ವಿಚಾರಣೆ ಕೈಗೊಂಡು, ಸತ್ಯ ಬಯಲುಮಾಡಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. ಇನ್ನು ಸಚಿವರ ಪಿಎ ಕೂಡ ಇದೇ ಅರ್ಥದ ಮಾತುಗಳನ್ನ ಆಡಿದ್ದಾರೆ.

O