Friday, September 20, 2024
ರಾಜಕೀಯ

“ಮಾಡಿ ಮಾಡಿ ಮತದಾನ’ ಅಂದ್ರು ಭಟ್ರು: ಬೊಂಬಾಟ್ ಸಾಂಗ್ ವೀಕ್ಷಿಸಿ

ರಾಜ್ಯದಲ್ಲೇ ಮೊದಲ ಬಾರಿಗೆ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಯೋಗರಾಜ್​ ಭಟ್​ ನೇತೃತ್ವದಲ್ಲಿ ಸಿದ್ಧವಾಗಿರೋ ರಾಜ್ಯ ವಿಧಾನಸಭಾ ಚುನಾವಣೆಯ ಧ್ಯೇಯ ಗೀತೆಯನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ವಿಕಾಸಸೌಧದಲ್ಲಿ ಬಿಡುಗಡೆ ಮಾಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಗೀತೆಯನ್ನು ರಚಿಸಿ ನಿರ್ದೇಶಿಸಿರುವ ಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, ನಮ್ಮ ತಂಡ ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ರಾಜ್ಯದ ನೈಜ ಸ್ಪೂರ್ತಿಯೊಂದಿಗೆ ಗೀತೆ ರೂಪುಗೊಂಡಿದೆ. ಪ್ರತಿಯೊಬ್ಬರೂ ಮತದಾನ ಏಕೆ ಮಾಡಬೇಕು ಎಂಬ ಸಂದೇಶವನ್ನು ಗೀತೆ ಸಾರುತ್ತದೆ. ಗೀತೆಯು ಮತದಾನ ಪ್ರಮಾಣ ಹೆಚ್ಚಲು ಉತ್ತೇಜಿಸಲಿದೆ. ವಿಕಲಚೇತನರು, ಆದಿವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಯುವ ಮತದಾರರನ್ನು ಚಿತ್ರೀಕರಣದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಗಾಯಕ ವಿಜಯ್‌ ಪ್ರಕಾಶ್‌ ಮತ್ತು ತಂಡದ ಗಾಯನದೊಂದಿಗೆ ಗೀತೆ ರೂಪುಗೊಂಡಿದೆ. ನೃತ್ಯ ನಿರ್ದೇಶಕ ಇಮ್ರಾನ್‌ ಸರ್ದಾರಿಯಾ ಗೀತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಧಾನಸೌಧ ಸೇರಿದಂತೆ ರಾಜ್ಯದ ಹಲವೆಡೆ ಚಿತ್ರೀಕರಣವಾಗಿದ್ದು, ರಾಜ್ಯದ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿದೆ. 150 ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮತದಾನದ ಬಗೆಗಿನ ಬೊಂಬಾಟ್ ಸಾಂಗ್ ವೀಕ್ಷಿಸಿ.

ಜಾಹೀರಾತು

https://youtu.be/pPR_Xm5zXPg