Tuesday, January 21, 2025
ಪುತ್ತೂರು

ಪುತ್ತೂರು ತಾಲೂಕಿನ ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆಯಲ್ಲಿ ನಡೆಯಿತು ವಿಸ್ಮಯ; ತೀರ್ಥ ಬಾವಿಯಲ್ಲಿ ಕಾಣಿಸಿಕೊಂಡಿತು ನಾಗದೇವರ ಹೆಡೆರೂಪ– ಕಹಳೆ ನ್ಯೂಸ್

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಎಪ್ರಿಲ್ 10ರಂದು ವಿಸ್ಮಯವೊಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಟಿ ಚೆನ್ನಯರು ತಮ್ಮ ಬದುಕಿನುದ್ದಕ್ಕೂ ಆರಾಧಿಸಿಕೊಂಡು ಬರುತ್ತಿದ್ದ ನಾಗ ಬಿರ್ಮೆರ್, ನಾಗ ಕನ್ನಿಕೆ, ರಕ್ತೇಶ್ವರಿ ಗುಡಿಗಳು ತೀರ್ಥಬಾವಿ ಮತ್ತು ಕೋಟಿ ಚೆನ್ನಯರ ಮಾತೆ ದೇಯಿಬೈದಿತಿ ಸಮಾಧಿ ಜೀರ್ಣೋದ್ಧಾರಗೊಂಡಿದೆ. ಇದರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಎಪ್ರಿಲ್ 21 ರಿಂದ 24 ರವರೆಗೆ ನಡೆಯಲಿದ್ದು, ನಿನ್ನೆ ಚಪ್ಪರ ಮುಹೂರ್ತ ನಡೆದಿದೆ. ಬಳಿಕ ಎರುಕೋಟ್ಯದಲ್ಲಿ ಜೀರ್ಣೋದ್ಧಾರಗೊಂಡಿರುವ ತೀರ್ಥ ಬಾವಿಯಲ್ಲಿ ನಾಗದೇವನ ಹೆಡೆರೂಪ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡುತ್ತಿರುವ ಕೋಟಿ ಚೆನ್ನಯರ ಜನ್ಮಸ್ಥಾನ ಹಾಗೂ ಮೂಲಸ್ಥಾನ ಸಂಚಲನ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಭಕ್ತರು ಈ ಪವಾಡವನ್ನು ವೀಕ್ಷಿಸಿದರು. ಹಾಗೂ ಕೌತುಕಕಾರಿ ಘಟನೆಯ ವಿಡೀಯೊ ಮತ್ತು ಪೋಟೊಗಳನ್ನು ತಮ್ಮ ಮೊಬೈಲ್ ಪೋನ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು