Recent Posts

Tuesday, January 21, 2025
ಬೆಳ್ತಂಗಡಿ

ಮುಂಡಾಜೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾದ ಕೋಳಿಗಳನ್ನು ಹಿಡಿಯಲು ಮುಗಿಬಿದ್ದ ಜನ ; 50ಕ್ಕೂ ಅಧಿಕ ಕೋಳಿಗಳು ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73 ರ ಪಕ್ಕದಲ್ಲಿ 150 ಕ್ಕೂ ಹೆಚ್ಚು ಸೇಲಂ ತಳಿ ಕೋಳಿಗಳನ್ನು ಎಸೆಯಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಯ ತಿಳಿದು ಜನರು ಸ್ಥಳಕ್ಕೆ ಧಾವಿಸಿ ಸಾಧ್ಯವಾದಷ್ಟು ಕೋಳಿಗಳನ್ನು ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ಆದರೆ ಇದೇ ವೇಳೆ 50 ಕ್ಕೂ ಹೆಚ್ಚು ಕೋಳಿಗಳು ಅನಾರೋಗ್ಯದಿಂದ ಬಳಲುತ್ತಿರುವುದು ಕಾಣಿಸಿಕೊಂಡಿದೆ. ಅಲ್ಲಿ ಸತ್ತ ಕೋಳಿಗಳು ಇದ್ದುದರಿಂದ ಜೀವಂತ ಕೋಳಿಗಳನ್ನು ತೆಗೆದುಕೊಂಡು ಹೋದವರು ಅದನ್ನು ತಿನ್ನಬಾರದು ಎಂದು ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಂಜಿನಿ ದೇವಿ ಜನರಿಗೆ ಸಲಹೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು