Tuesday, January 21, 2025
ಬಂಟ್ವಾಳ

ಬಂಟ್ವಾಳ : ಭಾರೀ ಸಿಡಿಲು ಸಹಿತ ಗಾಳಿ ಮಳೆ, ಇಬ್ಬರಿಗೆ ಗಾಯ ; ಲಕ್ಷಾಂತರ ಮೌಲ್ಯದ ಹಾನಿ, ಮೆಸ್ಕಾಂ ಗೆ ಅಪಾರ ನಷ್ಟ-ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನಾದ್ಯಂತ ಭಾನುವಾರ ರಾತ್ರಿ ಭಾರೀ ಗುಡುಗು ಮತ್ತು ಮಿಂಚು ಸಹಿತ ದಿಢೀರನೆ ಸುರಿದ ಗಾಳಿ ಮಳೆಗೆ ಇಲ್ಲಿನ ಹಲವು ಮನೆಗಳಿಗೆ ಹಾನಿಯಾಗಿ ಮೆಸ್ಕಾಂ ಇಲಾಖೆಗೂ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವಳಪಡೂರು ಗ್ರಾಮದ ಬರ್ಕಟ ನಿವಾಸಿ 29 ವರ್ಷದ ಗೀತಾ ಮತ್ತು ಅವರ ಪುತ್ರಿ 10 ವರ್ಷದ ರಶ್ಮಿತಾ ಸಿಡಿಲು ಬಡಿದು ಗಾಯಗೊಂಡು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಜಿಪ ಮುನ್ನೂರು ಗ್ರಾಮದ ಮಿತ್ತ ಕಟ್ಟ ನಿವಾಸಿ ಲಲಿತ ಎಂಬವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದೆ. ಶಂಭೂರು ಗ್ರಾಮದ ಬೂತಲೆಮಾರು ನಿವಾಸಿ ಮುತ್ತಮ್ಮ ಎಂಬವರ ಮನೆ ಹಾನಿಗೀಡಾಗಿದ್ದು, ಇದೇ ಗ್ರಾಮದ ಕರ್ತಪಾಲು ನಿವಾಸಿ ಸುಂದರ ಎಂಬವರ ಮನೆ ಜಖಂಗೊಂಡಿದೆ. ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ಚಂದಪ್ಪ ಮಡಿವಾಳ ರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ತಾಲೂಕಿನ ಸಜಿಪಮುನ್ನೂರು, ಶಂಭೂರು, ಬಾಳ್ತಿಲ, ಕಾವಳಪಡೂರು, ನರಿಕೊಂಬು, ಸಜಿಪನಡು, ಪುದು, ಬಡಗಬೆಳ್ಳೂರು, ಕೊಡ್ಮಾಣ್, ನರಿಂಗಾನ ಮತ್ತಿತರ ಕಡೆಗಳಲ್ಲಿ ಮನೆ ಹಾನಿಗೀಡಾಗಿದ್ದು ರೂ 15 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ. ಇಲ್ಲಿನ ಸುಮಾರು 8 ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ, 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಂದು ದನದ ಕೊಟ್ಟಿಗೆ ಹಾನಿಗೀಡಾಗಿದ್ದು, 4 ಕಡೆ ತೋಟಗಾರಿಕಾ ಬೆಳೆ ನಾಶವಾಗಿ ರೂ 60 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಲವೆಡೆ ರಾತ್ರಿಯಿಡೀ ವಿದ್ಯುತ್ ಕೈಗೊಟ್ಟಿದ್ದು, ಸೋಮವಾರ ಬೆಳಿಗ್ಗೆಯಿಂದಲೇ ಎಲ್ಲೆಡೆ ದುರಸ್ತಿ ಕಾರ್ಯ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು