Wednesday, January 22, 2025
ಉಡುಪಿ

ಈದು ಶ್ರೀ ವನದುರ್ಗಾ ದೇವಸ್ಥಾನದ ವರ್ಧಂತ್ಯುತ್ಸವ ಹಾಗೂ ಶ್ರೀ ಪಂಚದುರ್ಗಾ ಮಂತ್ರ ಹೋಮ-ಕಹಳೆ ನ್ಯೂಸ್

ಉಡುಪಿ : ಈದು ಶ್ರೀ ವನದುರ್ಗಾ ದೇವಸ್ಥಾನ ಇದರ ವರ್ಧಂತ್ಯುತ್ಸವ ಹಾಗೂ ಶ್ರೀ ಪಂಚದುರ್ಗಾ ಮಂತ್ರ ಹೋಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಏಪ್ರಿಲ್ 9ರಂದು ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾತಃಕಾಲ ಗಣಹೋಮ, ಶ್ರೀ ಪಂಚದುರ್ಗಾ ಮಂತ್ರ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿ ಈ ಪ್ರಯುಕ್ತ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹೊಸ್ಮಾರು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಉಧ್ಘಾಟಿಸಿ, ಈ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಬಾರಿ ಪ್ರಚಲಿತಕ್ಕೆ ಬರುತ್ತಿರುವ ಶೃಧ್ಧಾ ಭಕ್ತಿಯ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು ಆರ್ಶಿವಚನವಿತ್ತರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು. ದಿಕ್ಸೂಚಿ ಭಾಷಣಕಾರರಾದ ಭಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆರ್ ಮಾತನಾಡಿ, ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ಹಾಗೂ ಭಾರತೀಯತೆಯ ವೈಭವದ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷರಾದ ಅಶೋಕ್ ಕುಮಾರ್ ಜೈನ್ , ವಿಶ್ವ ಹಿಂದೂ ಪರಿಷತ್ ತಾಲೂಕು ಉಪಾಧ್ಯಕ್ಷರಾದ ಅಶೋಕ್ ಪಾಲಡ್ಕ, ಭಜರಂಗದಳ ತಾಲೂಕು ಸಂಚಾಲಕ ಚೇತನ್ ಪೇರಲ್ಕೆ, ಶಾಸಕರ ಆಪ್ತ ಸಹಾಯಕರಾದ ಹರೀಶ್ ಅಂಚನ್, ಮಾಪಾಲು ಜಯವರ್ಮ ಜೈನ್, ಜಗದೀಶ್ ಅಂಚನ್ ಈದು, ರತೀಶ್ ಹೊಸ್ಮಾರು, ಗುರಿಕಾರರಾದ ಉಮಣ ಗೌಡ, ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ಅನಂತ ಭಟ್ ಉಪಸ್ಥಿತಿದ್ದರು. ಪ್ರಸನ್ನ ಕರ್ಮಾಕರ್ ಹುದಂಗಜೆ ಧಾರ್ಮಿಕ ಪ್ರವಚನ ನೀಡಿದರು. ಕುಮಾರಿ ಚೈತನ್ಯ,ಕುಮಾರಿ ಯಶಸ್ವಿನಿ ಪ್ರಾರ್ಥಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಎನ್ ಇ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಶಾಂತ್ ಚಿತ್ತಾರ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು. ರಾತ್ರಿ 10 ಘಂಟೆಯಿಂದ ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಿರಿಯಡ್ಕ ಇವರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ತುಳು ಯಕ್ಷಗಾನ ಬಯಲಾಟ ಜರಗಿತು.