Tuesday, January 21, 2025
ಸುದ್ದಿ

ಎಪ್ರಿಲ್ 15ರಂದು ಓಮನ್ ಹಾಗೂ ಯುಎಇ ರಾಷ್ಟ್ರಗಳಿಗೆ “ಇಂಗ್ಲಿಷ್” ಎಂಟ್ರಿ ; ತುಳು ಕಲಿತು ರೆಡಿ ಇರಿ-ಕಹಳೆ ನ್ಯೂಸ್

ಮಂಗಳೂರು : ಓಮನ್ ಹಾಗೂ ಯುಎಇ ( UAE ) ರಾಷ್ಟ್ರಗಳಲ್ಲಿ ಹಾಸ್ಯದ ಹೊನಲು ಹರಿಯಲು ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಹಾಸ್ಯದ ಹೊನಲು ಹರಿಸಲು ಬರುತ್ತಿರುವ “ಇಂಗ್ಲಿಷ್” ನೋಡಲು ಕಾತರದಿಂದ ಕಾಯುತ್ತಿರುವ ಎಲ್ಲರೂ ತುಳು ಕಲಿತು ರೆಡಿ ಇರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು – ಪುತ್ತೂರು- ಸುಳ್ಯ – ಬೆಳ್ತಂಗಡಿ- ಮೂಡಬಿದ್ರೆ – ಉಡುಪಿ- ಕುಂದಾಪುರ- ಮಣಿಪಾಲ- ಕಾರ್ಕಾಳ -ಬೆಂಗಳೂರು-ಮೈಸೂರು-ಸಕಲೇಶಪುರ- ಶುಂಠಿಕೊಪ್ಪ- ಹುಬ್ಬಳಿ- ಶಿವಮೊಗ್ಗ-ಕಾಸರಗೊಡ್ ಸೇರಿದಂತೆ ಬಿಡುಗಡೆಗೊಂಡಿರುವ ಎಲ್ಲಾ ಕಡೆಗಳಲ್ಲಿ ಭರ್ಜರಿ ಯಶಸ್ಸನ್ನು ಪಡೆದು ಎಲ್ಲ ಸಿನಿಮಾ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಏಪ್ರಿಲ್ 15ರಂದು ಓಮನ್ ಹಾಗೂ ಯುಎಇ ( UAE ) ರಾಷ್ಟ್ರಗಳಲ್ಲಿ ತೆರೆ ಕಾಣಲಿದೆ.

ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರರಂಗದ ಬಹುನಿರೀಕ್ಷೆಯ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಮಾರ್ಚ್ 26ರಂದು ಶುಕ್ರವಾರ ಕರ್ನಾಟಕದಾದ್ಯಂತ 26 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿತು.

ಉತ್ತಮ ಹಾಸ್ಯ, ಉತ್ತಮ ಸಂದೇಶ, ನವೀರಾದ ಪ್ರೇಮ ಪ್ರಣಯ, ಪ್ರೀತಿಗೆ ಇಂಗ್ಲಿಷ್ ವ್ಯಾಮೋಹ ಅಡ್ಡಿ ಹಾಗೂ ಕೌಟುಂಬಿಕ ಸಮಸೈಗಳ ಹಿನ್ನೆಲೆ ಕೊನೆಗೆ ಪ್ರೇತಗಳಿಗೆ ಮದುವೆ ಮಾಡುವ ಜಂಜಾಟದ ಮೂಲಕ ಇಡೀ ಚಿತ್ರ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಂತೆ ಮಾಡುತ್ತದೆ. ಜೊತೆ ಗೆ ಸುಮಧುರವಾರ ಹಾಡುಗಳು ಸಿನಿ ಪ್ರೀಯರಿಗೆ ಮುದ ನೀಡುತ್ತದೆ.

ಈ ಎಲ್ಲಾ ವಿಭಿನ್ನ, ವಿಶೇಷ, ವಿಚಿತ್ರಗಳ ಮೂಲಕ, ಅದ್ಭುತ ಯಶಸ್ಸಿನೊಂದಿಗೆ ಮೂರನೇ ವಾರಕ್ಕೆ ಕಾಲಿಟ್ಟಿರುವ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಚಿತ್ರ ಏಪ್ರಿಲ್ 15ರಂದು ಓಮನ್ ಹಾಗೂ ಯು ಎ ಇ ( UAE ) ರಾಷ್ಟ್ರಗಳಲ್ಲಿ ತೆರೆ ಕಾಣುವ ಮೂಲಕ ತುಳು ಚಿತ್ರರಂಗ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುತ್ತಿದೆ.

ಬಿಡುಗಡೆಗೂ ಮುನ್ನವೇ ಹಲವಾರು ದಾಖಲೆಗಳನ್ನು ನಿರ್ಮಿಸಿ ತುಳು ಚಿತ್ರರಂಗದಲ್ಲೇ ಹೊಸ ಇತಿಹಾಸವನ್ನು ಸೃಷ್ಠಿಸಿರುವ ಈ ಸಿನೆಮಾದಲ್ಲಿ ಪ್ರತಿಯೊಂದು ಪಂಚಿಗ್ ಡೈಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತ, ಸುಂದರ ತಾಣಗಳ ದೃಶ್ಯ ಎಲ್ಲವೂ ಸೂಪರ್. ಒಟ್ಟಾರೆ ಚಿತ್ರವನ್ನು ಎಲ್ಲ ವರ್ಗದವರು ಒಟ್ಟು ಕುಳಿತು ನೋಡುವಂತೆ ನಿರ್ಮಿಸಲಾಗಿದೆ.

ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರ ಕಥೆ, ಸಂಭಾಷಣೆ, ಒಂದಕ್ಕಿಂತ ಒಂದು ಹಿಟ್ ಹಾಡುಗಳು ಒಟ್ಟಾರೆ ಸಿನೆಮಾದ ಗೆಲುವಿಗೆ ಸ್ಪೂರ್ತಿಯಾಗಿವೆ.

8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ತುಳು “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಆಗಿದೆ. ಜೊತೆಗೆ ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಗ್ಗಳಿಕೆ ಕೂಡ ಚಿತ್ರದ್ದು.

ಇದೇ ಮೊದಲ ಬಾರಿಗೆ ಕನ್ನಡದ ಮೇರು ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾ ಮೂಲಕ ತುಳು ಚಿತ್ರರಂಗಕ್ಕೆ ಅವರ ಮೊದಲ ಎಂಟ್ರಿ ಆಗಿದೆ. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.

“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದ ‘ವಲ್ರ್ಡ್ ಪ್ರೀಮಿಯರ್ ಶೋ’ ಕನಸಿನ ನಗರಿ ದುಬೈಯ Al Ghurair centre Deira ದಲ್ಲಿ 2020ರ ಮಾರ್ಚ್ 13ರಂದು ಅದ್ದೂರಿ ಪ್ರದರ್ಶನಗೊಂಡಿದ್ದು, ‘ವಲ್ರ್ಡ್ ಪ್ರೀಮಿಯರ್ ಶೋ’ ದುಬೈಯಲ್ಲಿ ನಡೆದಿರುವುದು ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬ ಖ್ಯಾತಿಗೂ ಈ ಸಿನೆಮಾ ಪಾತ್ರವಾಗಿದೆ.

“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾದಲ್ಲಿ ತುಳು ಸಿನೆಮಾರಂಗದ ಹಾಸ್ಯಾದಿಗ್ಗಜರ ದಂಡೇ ಇದೆ. ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ, ನಾಯಕ- ನಟನಾಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ನಾಯಕಿ ನಟಿ ನವ್ಯ ಪೂಜಾರಿ ನಟಿಸಿದ್ದು, ಇವರ ನಟನೆ ಎಲ್ಲರಿಗೂ ಖುಷಿಕೊಡುತ್ತೆ.

ಈಗಾಗಲೇ ತಾನು ಅಕ್ಮೆ(ACME ) ಮೂವೀಸ್ ಇಂಟರ್‍ನ್ಯಾಷನಲ್ ಲಾಂಛನದಲ್ಲಿ ಶ್ರೀ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ ‘ಮಾರ್ಚ್ 22 ‘, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, ‘ಯಾನ’ ದಂತಹ ಕನ್ನಡ ಸಿನೆಮಾಗಳು ಅತ್ಯಂತ ಯಶಸ್ಸು ಕಂಡಿದೆ. ‘ಮಾರ್ಚ್ 22 ‘ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ.