Tuesday, January 21, 2025
ಬಂಟ್ವಾಳ

ಅಕ್ರಮ ಗೋವು ಕಳ್ಳಸಾಗಣೆ ; ವ್ಯಕ್ತಿಯನ್ನು ತಡೆದು ವಶಕ್ಕೆ ಪಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಕಾಶಿಮಠದಲ್ಲಿ ಏಪ್ರಿಲ್ 13ರಂದು ಅಕ್ರಮ ಗೋವು ಕಳ್ಳಸಾಗಣೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಹಿಂದೂ ಜಾಗರಣ ವೇದಿಕೆಯ ಕೆಲವು ಕಾರ್ಯಕರ್ತರು, ತಡೆದು ವಶಕ್ಕೆ ಪಡೆದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಮಾಣಿ ಮುಲಿಬೈಲಿನ ವ್ಯಕ್ತಿಯೋರ್ವ ತನ್ನ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ, ವಿಷಯ ತಿಳಿದ ಹಿಂಜಾವೇ ಕಾರ್ಯಕರ್ತರು ವಾಹನವನ್ನು ತಡೆದು ಗೋವುಗಳನ್ನು ರಕ್ಷಿಸಿದ್ದಾರೆ. ಇದು ಅಕ್ರಮ ಸಾಗಾಟವಲ್ಲ ಎಂದು ನೋಡುವವರಿಗೆ ಕಾಣಿಸಬೇಕೆಂಬ ಉದ್ದೇಶದಿಂದ ಆರೋಪಿ ಹಸುವಿನೊಂದಿಗೆ ಕರುವನ್ನು ಕೂಡಾ ಕೊಂಡೊಯ್ಯುತ್ತಿದ್ದ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು