Recent Posts

Sunday, January 19, 2025
ರಾಜಕೀಯ

ನಾನು ಪಕ್ಷದ ನಿರ್ಧಾರಕ್ಕೆ ಬದ್ಧ ; ಸಂಜೀವ ಮಠಂದೂರು ಗೆಲುವೇ ನಮ್ಮ ಗುರಿ – ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಪುತ್ತೂರು ವಿಧಾನಸಭಾ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಂಢಾಯದ ಹೊಗೆ ವ್ಯಾಪಕವಾಗಿ ಕೇಳಿ ಬರುತ್ತಿತ್ತು ಸಂಜೀವ ಮಠಂದೂರು ವಿರುದ್ಧವಾಗಿ ತೀವ್ರ ಆಕ್ರೋಶ ಕೇಳಿ ಬಂದಿತ್ತು. ಒಂದು ಹಂತದವರೆಗೆ ಹೋಗಿ ಅಭ್ಯರ್ಥಿ ಬದಲಾಯಿಸುವಲ್ಲಿ ವರೆಗೆ ಮುಟ್ಟಿತ್ತು.

ಈ ಸಂದರ್ಭದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಕಿಶೋರ್ ಕುಮಾರ್ ಪುತ್ತೂರು ಪ್ರತಿಕ್ರಿಯೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊನ್ನೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆದ ನಂತರ ನನಗೆ ಕರೆಗಳ ಮೇಲೆ ಕರೆಗಳು ಬರುತ್ತಿದ್ದು ಅಭಿಮಾನಿಗಳ ಕರೆಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ. ಕ್ಷಮೆ ಇರಲಿ. ಸದ್ಯಕ್ಕೆ ಪಕ್ಷ ತೆಗೆದುಕೊಂಡ ನಿರ್ಧಾರದಿಂದ ನನಗೆ ಬೇಸರ ಆಗಿದ್ದು ನಿಜ. ಆದರೆ ಪಕ್ಷದ ಈ ನಡೆಗೆ ನಾನು ಪಕ್ಷವನ್ನು ಬಿಟ್ಟು ದ್ರೋಹ ಬಗೆಯುವುದಿಲ್ಲ. ನನ್ನ ತಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮವಸ್ತ್ರ ಹಾಕಿ ಸೈಕಲ್ ಮೇಲೆ ತಿರುಗಿ ತಾಲೂಕಿನಲ್ಲಿ ಸಂಘಟನೆ ನಡೆಸಿದ್ದಾರೆ. ಅಂತಹದರಲ್ಲಿ ನಾನು ಪಕ್ಷಕ್ಕೆ ದ್ರೋಹ ಮಾಡಿದೆ ಎಂದರೆ ಅದು ನನ್ನ ತಂದೆಯj ನಂಬಿಕೆಯ ಮೇಲೆ ಮಾಡಿದ ದ್ರೋಹ ಆಗುತ್ತದೆ. ಸದ್ಯಕ್ಕೆ ನನಗೆ ಟಿಕೆಟ್ ಸಿಕ್ಕದೆ ಇದ್ದರೂ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ಕೇವಲ ಪುತ್ತೂರು ಕ್ಷೇತ್ರ ಮಾತ್ರವಲ್ಲ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಹೊಣೆ ನನ್ನದು ಎಂದು ತಿಳಿದು ಪಕ್ಷಕ್ಕಾಗಿ ದುಡಿಯುತ್ತೇನೆ.
ನಿಮ್ಮ ಅಭಿಮಾನಕ್ಕೆ ನಾನು ಎಂದೂ ಚಿರಋಣಿ. ಜೈ ಹಿಂದ್
– ಕಿಶೋರ್ ಕುಮಾರ್ ಪುತ್ತೂರು

ಜಾಹೀರಾತು
ಜಾಹೀರಾತು
ಜಾಹೀರಾತು