ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರಿಗೆ ಘಟಕದಲ್ಲಿ ಎ14 ರಂದು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಹುಚ್ಚವ್ವನಹಳ್ಳಿ ಬಣ) ಸರ್ಕಾರದ ಧೋರಣೆಯನ್ನ ಖಂಡಿಸಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕ.ಕೆ.ಹಟ್ಟಿ ದೇವರ ಮನೆ ಮಹೇಶ ಮಾತನಾಡಿದರು. ಸಾರಿಗೆ ನೌಕರರ ನ್ಯಾಯ ಯುತವಾದ ಹಕ್ಕೊತ್ತಾಯಗಳನ್ನು ಶೀಘ್ರವೇ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು. ಸರ್ಕಾರ ಸಾರಿಗೆ ನೌಕರರಿಗೆ ತುಂಬಾ ಅನ್ಯಾಯ ಮಾಡುತ್ತಿದೆ ಎಂದು ಮಹೇಶ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಕ್ಕಾಗಿ ಶಾಂತಿಯುತ ಹೋರಾಟಕ್ಕೆ ಸಂವಿಧಾನದಲ್ಲಿ ಅವಕಾಶವಿದ್ದು, ಸಾರಿಗೆ ಇಲಾಖೆ ನೌಕರರು ಶಾಂತಿಯುತವಾಗಿ ಧರಣಿ ಮಾಡುವುದನ್ನ ಸಹಿಸದ ಇಲಾಖೆ. ನೌಕರರ ಮೇಲೆ ಒತ್ತಡ ಹಾಕಿ ದೌರ್ಜನ್ಯ ದಭ್ಬಾಳಿಕೆ ಹಾಕಿ ದಬ್ಬಾಳಿಕೆ ಮೆರೆಯುತ್ತಿದ್ದು, ಈ ಮೂಲಕ ಸರ್ವಾಧಿಕಾರ ಧೋರಣೆ ತಾಳಿ ಪ್ರಜಾಪ್ರಭುತ್ವ ವಿರೋಧಿ ನಡೆ ತೋರಿದೆ.
ಧಮನಿತರ ಶೋಷಿತರ ದುರ್ಬಲರಿಗೆ ಅನ್ಯಾಯವಾದಾಗ ಅವರಿಗೆ ಧ್ವನಿಯಾಗುವುದು ಸಂಘಟನೆಯ ಉದ್ದೇಶವಾಗಿದೆ, ಕಾರಣ ನ್ಯಾಯ ಯುತವಾದ ಸಾರಿಗೆ ನೌಕರರ ಶಾಂತಿಯುತ ಹೋರಾಟಕ್ಕೆ, ರೈತ ಸಂಘಟನೆ ಹಾಗೂ ಹಸಿರು ಸೇನೆ ಅವರೊಂದಿಗಿದ್ದು ಬೆಂಬಲವಾಗಿರುತ್ತದೆ ಎಂದರು. ಸಾರಿಗೆ ನೌಕರರ ವಿವಿದ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಹಾಗೂ ವಿವಿದ ಹಕ್ಕೋತ್ತಾಯಗಳಿರುವ ಪತ್ರವನ್ನು ಮಹೇಶರವರ ನೇತೃತ್ವದಲ್ಲಿ,ಮುಖ್ಯ ಮಂತ್ರಿಗಳಿಗೆ ಇಲಾಖಾಧಿಕಾರಿಗಳ ಮೂಲಕ ಹಕ್ಕೋತ್ತಾಯ ಪತ್ರ ನೀಡಿದರು. ರೈತ ಮುಖಂಡರಾದ ಚನ್ನಬಸಪ್ಪ ಬಣಕಾರ,ಜೆ.ನಾಗರಾಜ, ಹಾಲಸ್ವಾಮಿ,ಖಾಸೀಂ ಸಾಬ್, ಮಹೇಶಪ್ಪ, ಎಂ.ಸೋಮಪ್ಪ, ಕಾಟೇರ ಶೇಷಪ್ಪ,ನಾಗಪ್ಪ ಸೇರಿದಂತೆ ಮತ್ತಿತರರಿದ್ದರು.