ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಮತ್ತು ಗ್ರಾಮ ಪಂಚಾಯತ್ ಬೆಳ್ಳಾರೆ ಇದರ ಆಶ್ರಯದಲ್ಲಿ ಡೆಂಗ್ಯೂ ಮಾಹಿತಿ ಕಾರ್ಯಾಗಾರ-ಕಹಳೆ ನ್ಯೂಸ್
ಬೆಳ್ಳಾರೆ : ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಗ್ರಾಮ ಪಂಚಾಯತ್ ಬೆಳ್ಳಾರೆ ಇದರ ಆಶ್ರಯದಲ್ಲಿ ಡೆಂಗ್ಯೂ ಮಾಹಿತಿ ಕಾರ್ಯಾಗಾರ ದಿನಾಂಕ 14/04/2021 ಬುಧವಾರದಂದು ನೆಟ್ಟಾರು ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವತಿಯವರು ಡೆಂಗ್ಯೂ ಜ್ವರದ ಲಕ್ಷಣ, ಹರಡುವ ರೀತಿ,ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಸೂಪರ್ ವೈಸರ್ ವಾಸುದೇವ ಮಾತನಾಡಿ ಡೆಂಗ್ಯೂ ಬಗ್ಗೆ ಎಚ್ಚರವಿರಲಿ.ಮನೆಯ ಪರಿಸರ ಸ್ವಚ್ಛವಾಗಿಟ್ಟುಕೊಂಡಲ್ಲಿ ರೋಗ ಹರಡುವುದನ್ನು ಮತ್ತು ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಪನ್ನೆ,ಉಪಾಧ್ಯಕ್ಷೆ ಗೌರಿ ನೆಟ್ಟಾರು, ನೆಟ್ಟಾರು ವಾರ್ಡ್ ಸದಸ್ಯರಾದ ಶ್ವೇತಾ ಶೈಲೇಶ್, ವಿಠಲ್ ದಾಸ್,ತಡಗಜೆ ವಾರ್ಡ್ ಸದಸ್ಯ ದಿನೇಶ್ಚಂದ್ರ ಹೆಗ್ಡೆ, ಬೆಳ್ಳಾರೆ ಪಿ ಡಿ ಓ ಶ್ರೀಮತಿ ಭವ್ಯ,ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಕೋಶಾಧಿಕಾರಿ ಪ್ರತೀಕ್ ನೆಟ್ಟಾರು,ಗೌರವಾಧ್ಯಕ್ಷ ವೆಂಕಟ್ರಮಣ ಗೌಡ,ಶೈಲೇಶ್ ನೆಟ್ಟಾರು,ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಬೆಳ್ಳಾರೆ ಆರೋಗ್ಯ ಕೇಂದ್ರದ ವಸಂತಿ ಸ್ವಾಗತಿಸಿ, ಧನ್ಯವಾದವಿತ್ತರು,ಕಾರ್ಯಾಗಾರದ ನಂತರ ನೆಟ್ಟಾರು ಪರಿಸರದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು.