ಬಂಟ್ವಾಳ : ಬಂಟ್ವಾಳ ಇಲ್ಲಿನ ರಾಯಿ ಸಮೀಪದ ಕೊಯಿಲ ಗ್ರಾಮ ಬೈದಗುತ್ತು ನಲ್ಕೆ ಬಾಕಿಮಾರು ಗದ್ದೆ ಎಂಬಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ದೈವ ಸಾನಿಧ್ಯದಲ್ಲಿ ಇದೇ 18ರಂದು ರಾತ್ರಿ ಗಂಟೆ 7ರಿಂದ ಧೂಮಾವತಿ ಮತ್ತು ಮೈಸಂದಾಯ ಸಹಿತ ಕೊಡಮಣಿತ್ತಾಯ ಒಡ್ಯಾಣೇಶ್ವರಿ ಪರಿವಾರ ದೈವಗಳಿಗೆ ಪ್ರಥಮ ವರ್ಷದ ಮಾರಿ ‘ದೊಂಪದ ಬಲಿ ಉತ್ಸವ’ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 10ರಿಂದ ನಡ್ವಂತಾಡಿ ಉದಯ ಪಾಂಗಣ್ಣಾಯ ತಂತ್ರಿ ಮತ್ತು ಅರಳ ಹರೀಶ ಭಟ್ ಮಾರ್ಗದರ್ಶನದಲ್ಲಿ ಗಣಹೋಮ, ದುರ್ಗಹೋಮ, ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ 6.30 ಗಂಟೆಗೆ ಈರೇಂದಿಲು ಗುತ್ತು, ರಾತ್ರಿ ಗಂಟೆ 8ಕ್ಕೆ ಕೊಯಿಲ ಹಾಂತ್ಲಾಜೆಗುತ್ತು, ರಾತ್ರಿ 9.30 ಗಂಟೆಗೆ ಬುರಾಲು ಮನೆಯಿಂದ ದೈವಗಳ ಭಂಡಾರ ಬಂದು ದೈವಗಳಿಗೆ ದೊಂಪದ ಬಲಿ ಉತ್ಸವ ಮತ್ತು ಕಲ್ಕುಡ-ಕಲ್ಲುರ್ಟಿ ದೈವಗಳಿಗೆ ಕೋಲ ಬಲಿ ಸೇವೆ ನಡೆಯಲಿದೆ. ಇದೇ ವೇಳೆ ಸಂಜೆ 6 ಗಂಟೆಗೆ ಕೊಯಿಲ ತೆಲಿಕೆದ ಕಲಾವಿದರಿಂದ ‘ಪಂಡ ಕೇನುಜೆರ್’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.