ಬೆಳ್ತಂಗಡಿ : ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ವಿಷು ಹಬ್ಬ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಎಸ್‍ಡಿಎಮ್ ಶಿಕ್ಷಕರಾದ ದಿವಾಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿಷು ಹಬ್ಬದ ಸಾಂಪ್ರದಾಯಿಕ ಹಿನ್ನಲೆ ಹಾಗೂ ವಿಷು ಹಬ್ಬದ ಉಪಯೋಗಗಳನ್ನು ತಿಳಿಸಿದರು. ನಮ್ಮ ಜಾನಪದ ಸಂಸ್ಕøತಿಯ ಆಚರಣೆಗಳಲ್ಲಿ ಒಂದಾದ ವಿಷು ಹಬ್ಬವು ಸ್ಥಳಮೂಲ, ಕೃಷಿ, ಸಂಸ್ಕøತಿಯನ್ನು ಕೂಡಿರುತ್ತದೆ. ಮುಳಿಯ ಜ್ಯುವೆಲ್ಸ್ ನವರು ಈ ರೀತಿಯ ಜಾನಪದ ಸಂಸ್ಕøತಿಯನ್ನು ಉಳಿಸಿಕೊಂಡು ಬರುತ್ತಿರುವುದು ಒಂದು ಶ್ಲಾಘಿನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕರಾದ ಗುರುರಾಜ್ ಅವಭೃತ, ಉಪ ಪ್ರಬಂಧಕರಾದ ಸತ್ಯಗಣೇಶ್ ಅನೇಕರು ಉಪಸ್ಥಿತರಿದ್ದರು.